ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ತೀವ್ರ ಕಳಪೆಯಾಗಿದ್ದು, ಆತಂಕಕಾರಿಯಾಗಿದೆ. ಈ ಹಿನ್ನೆಲೆ ಎಲ್ಲಾ ನ್ಯಾಯಮೂರ್ತಿಗಳು ಸಾಧ್ಯವಾದರೆ ವರ್ಚಯಲ್ ವಿಚಾರಣೆಗೆ ಅವಕಾಶ ನೀಡುವವಂತೆ ಕೋರಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾ. ಸಂಜಯ್ ಕುಮಾರ್ ಪೀಠದ ಮುಂದೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಪಿಲ್ ಸಿಬಲ್ ಸೇರಿದಂತೆ ವಕೀಲರು ದೆಹಲಿ ಮತ್ತು ಎನ್ಸಿಆರ್ನಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯ ಎದುರಿಸಲು ತಕ್ಷಣಕ್ಕೆ ಅಗತ್ಯ ಕ್ರಮದ ಕುರಿತು ಮನವಿ ಮಾಡಿದರು.
ಈ ವೇಳೆ ಸಾಧ್ಯವಿರುವ ಕಡೆಯಲ್ಲಿ ಎಲ್ಲಾ ನ್ಯಾಯಾಮೂರ್ತಿಗಳಿಗೂ ವರ್ಚುಯಲ್ ಆಗಿ ವಿಚಾರಣೆ ನಡೆಸುವಂತೆ ಹೇಳಿದ್ದೇವೆ ಎಂದು ಸಿಜೆಐ ತಿಳಿಸಿದರು.
ಮಾಲಿನ್ಯ ನಿಯಂತ್ರಣವೂ ಮಿತಿ ಮೀರಿದೆ ಎಂದು ಸಿಬಲ್ ತಿಳಿಸಿದರು. ಇದಕ್ಕೆ ಅನೇಕ ವಕೀಲರು ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಗೋಪಾಲ್ ಶಂಕರನಾರಾಣನ್ ಬೆಂಬಲ ವ್ಯಕ್ತಪಡಿಸಿದರು. ವರ್ಚುಯಲ್ ವಿಚಾರಣೆ ಎಲ್ಲಾ ಕೋರ್ಟ್ನಲ್ಲಿ ನಡೆಯಬೇಕಿದೆ. ಈ ಸಂದೇಶವೂ ಎಲ್ಲಾ ಇತರೆ ಕೋರ್ಟ್ಗಳಿಗೆ ಹೋಗಬೇಕು ಎಂದು ಕೂಡ ಸಿಬಲ್ ತಿಳಿಸಿದರು.
ನಾವು ಎಲ್ಲಾರಿಗೂ ಈ ಸಂದೇಶವನ್ನು ನೀಡಿದ್ದೇವೆ. ಇದಕ್ಕಿಂತ ಹೆಚ್ಚಾಗಿ ಇಂದು ಎಲ್ಲೆಡೆ ಆನ್ಲೈನ್ ಲಭ್ಯವಿದೆ ಎಂದು ಸಿಜೆಐ ತಿಳಿಸಿದರು. ಎಲ್ಲರಿಗೂ ಅವಕಾಶ ಕಲ್ಪಿಸುವ ಸಂದೇಶವನ್ನು ನಾವು ನೀಡಿದ್ದೇವೆ. ಇದಲ್ಲದೆ, ಆನ್‌ಲೈನ್‌ನಲ್ಲಿ ಇದೀಗ ಎಲ್ಲೆಡೆ ಲಭ್ಯವಿದೆ ಎಂದು ಸಿಜೆಐ ತಿಳಿಸಿದರು.
ದೆಹಲಿ ವಾಯು ಗುಣಮಟ್ಟ ತೀವ್ರ ಕಳಪೆ ವರ್ಗದಲ್ಲಿ ಕಂಡು ಬಂದಿದ್ದು, ತಕ್ಷಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಮಾಲಿನ್ಯ ವಿರೋಧಿ ಜಿಆರ್ಎಪಿ 4 ನಿರ್ಬಂಧವನ್ನು ಜಾರಿ ಮುಂದುವರೆಸಬೇಕು ಎಂದು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ತಿಳಿಸಿತು. ಕೋರ್ಟ್ ಅನುಮತಿ ಇಲ್ಲದೇ ವಾಯು ಮಾಲಿನ್ಯ ತಡೆಗಟ್ಟುವ ಕ್ರಮಗಳನ್ನು ಸಡಿಲ ಮಾಡಿದ್ದು ಯಾಕೆ?. ಈ ಮೂಲಕ ಅಪಾಯವನ್ನು ಆಹ್ವಾನಿಸುತ್ತಿದ್ದೀರಾ ಎಂದು ಸೋಮವಾರ ದೆಹಲಿ ಸರ್ಕಾರದ ವಿರುದ್ಧ ಚಾಟಿ ಬೀಸಿತ್ತು.
ದೆಹಲಿಯಲ್ಲಿ ಮಂಜು ಹೆಚ್ಚಾಗುತ್ತಿದ್ದಂತೆ ವಾಯು ಗುಣಮಟ್ಟ ತೀವ್ರ ಕಳಪೆ ಹಂತಕ್ಕೆ ಕುಸಿದಿದೆ. ಸೋಮವಾರ ದೆಹಲಿಯ ಎಕ್ಯೂಐ 484 ದಾಖಲಾಗಿದೆ. ಅನೇಕ ಪ್ರದೇಶದಲ್ಲಿ ಈ ಎಕ್ಯೂಐ 500ರ ಗಡಿ ದಾಟಿದೆ. ವಾಯು ಮಾಲಿನ್ಯ ಹಿನ್ನೆಲೆ ಮುಂದಿನ ಆದೇಶದವರೆಗೆ ಶಾಲೆ - ಕಾಲೇಜುಗಳನ್ನು ಕೂಡ ಆನ್ಲೈನ್ ಮೂಲಕ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ:'ದೆಹಲಿ ಗಾಳಿ ತೀವ್ರ ಕಳಪೆಯಾದರೂ ಕ್ರಮ ವಹಿಸಿಲ್ಲವೇಕೆ?': ಆಪ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ