ಪಶ್ಚಿಮ ಗೋದಾವರಿ, ಆಂಧ್ರಪ್ರದೇಶ:ಮಹಿಳೆಯೊಬ್ಬರಿಗೆ ಬಂದ ಪಾರ್ಸೆಲ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿಯಲ್ಲಿ ನಡೆದಿದೆ.
ಮಹಿಳೆ ಪಾರ್ಸೆಲ್‌ನಲ್ಲಿ ಅಪರಿಚಿತ ಶವವನ್ನು ಕಂಡು ಬೆಚ್ಚಿಬಿದ್ದಿದ್ದು , ಆಕೆಯ ಕುಟುಂಬಸ್ಥರು ಈ ಸಂಬಂಧ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲಾ ಎಸ್ಪಿ ನಯೀಮ್ ಅಸ್ಮಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಏನಿದು ಘಟನೆ?:ಮನೆ ನಿರ್ಮಾಣಕ್ಕಾಗಿ ಮಹಿಳೆಯೊಬ್ಬರು ಕ್ಷತ್ರಿಯ ಸೇವಾ ಸಮಿತಿಯಿಂದ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮೊದಲ ಹಂತದಲ್ಲಿ ಕ್ಷತ್ರಿಯ ಸೇವಾ ಸಮಿತಿಯಿಂದ ಮನೆ ನಿರ್ಮಾಣಕ್ಕೆ ಟೈಲ್ಸ್ ನೀಡಲಾಗಿತ್ತು. ನಂತರ, ಮಹಿಳೆ ಮತ್ತೆ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಎರಡನೇ ಕಂತಿನಲ್ಲಿ ಪಾರ್ಸೆಲ್‌ನಲ್ಲಿ ವಿದ್ಯುತ್ ಉಪಕರಣಗಳ ಬದಲು ಮೃತದೇಹ ಸಿಕ್ಕಿದೆ. ಮೃತದೇಹವನ್ನು ನೋಡಿದ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಜೈಪುರ - ಅಜ್ಮೀರ್ ಹೈವೇಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ : ಐದು ಮಂದಿ ಸಜೀವ ದಹನ, 37 ಜನರಿಗೆ ಗಾಯ