ಕರ್ನಾಟಕ

karnataka

ETV Bharat / bharat

ರಕ್ಷಣಾ ಸಚಿವರ ಸಾವಿನ ಕುರಿತು ಸುಳ್ಳು ಸುದ್ದಿ: ಯುಟ್ಯೂಬ್​ ವಿರುದ್ಧ ದೂರು ದಾಖಲು - YouTube channel aired false news

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಾವಿನ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ದೂರು ದಾಖಲಿಸಲಾಗಿದೆ.

Complaint Lodged Against YouTube channel aired false news about the death of Defence Minister Rajnath Singh
ರಾಜನಾಥ್​ ಸಿಂಗ್​ (ಐಎಎನ್​ಎಸ್​)

By ETV Bharat Karnataka Team

Published : Aug 24, 2024, 12:29 PM IST

ನವದೆಹಲಿ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸಾವಿನ ಕುರಿತು ಸುಳ್ಳು ಸುದ್ದಿ ಬಿತ್ತರಿಸಿದ ಯುಟ್ಯೂಬ್​ ಚಾನಲ್​ ವಿರುದ್ಧ ಗಾಜಿಯಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ನಾಯಕ ರಾಜೇಶ್​ ಸಿಂಗ್​ ಗಾಜಿಯಬಾದ್​ನ ಶಾಲಿಮರ್​ ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ಈ ದೂರನ್ನು ಸಲ್ಲಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಾವಿನ ಕುರಿತು ಸುಳ್ಳು ಸುದ್ದಿಯನ್ನು ಯೂಟ್ಯೂಬ್ ಚಾನೆಲ್ ಒಂದು ಪ್ರಸಾರ ಮಾಡಿದ ಹಿನ್ನೆಲೆ ಈ ದೂರು ದಾಖಲಿಸಲಾಗಿದೆ. ರಕ್ಷಣಾ ಸಚಿವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಈ ಸುಳ್ಳು ಸುದ್ದಿ ಕುರಿತು ಆತಂಕ ವ್ಯಕ್ತಪಡಿಸಿದ ಸ್ಥಳೀಯ ಬಿಜೆಪಿ ನಾಯಕ ರಾಜೇಶ್​ ಸಿಂಗ್​, ಸುಳ್ಳು ಸುದ್ದಿ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವ ಯೂಟ್ಯೂಬ್​ ಚಾನಲ್​ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ರೀತಿಯ ಸುದ್ದಿಗಳು ದೇಶದ ಭದ್ರತೆಗೆ ಮಾತ್ರ ಧಕ್ಕೆ ತರುವುದಿಲ್ಲ. ಇದು ಸಾಮಾಜಿಕ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಪ್ರಕರಣ ಸಂಬಂಧ ಪೊಲೀಸರು ದೂರು ಸ್ವೀಕರಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ಹಾಗೇ ಯೂಟ್ಯೂಬ್ ಚಾನೆಲ್‌ನ ಖಾತೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಮೇಲೆ 25 ಕೆ.ಜಿ ಚಿನ್ನ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿರಿವಂತ ಕುಟುಂಬ!: ವಿಡಿಯೋ ನೋಡಿ

ABOUT THE AUTHOR

...view details