ಕರ್ನಾಟಕ

karnataka

ಛತ್ತೀಸ್‌ಗಢ ಡಿಸಿಎಂ ಸೋದರಳಿಯ ಜಲಪಾತದಲ್ಲಿ ಮುಳುಗಿ ಸಾವು - Chhattisgarh DCM Nephew Dies

By PTI

Published : Aug 5, 2024, 3:39 PM IST

ಛತ್ತೀಸ್‌ಗಢದ ಡಿಸಿಎಂ ಅರುಣ್ ಸಾವೋ ಅವರ ಸೋದರಳಿಯ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Death of DCM nephew  Chhattisgarh DCM
ಜಲಪಾತ (ETV Bharat)

ಕವರ್ಧಾ(ಛತ್ತೀಸ್‌ಗಢ):ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ಅರುಣ್ ಸಾವೋ ಅವರ ಸೋದರಳಿಯ ಕಬೀರ್ಧಾಮ್ ಜಿಲ್ಲೆಯ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಭಾನುವಾರ ಸಂಜೆ ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗಿದ್ದ ತುಷಾರ್ (20), ಬೋಡ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿ ದಹ್ರಾ ಜಲಪಾತದಲ್ಲಿ ಮುಳುಗಿದ್ದಾರೆ. ಇಂದು ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿದ್ದ ಈಜುಗಾರರು ಬಂಡೆಯ ಕೆಳಗೆ ಸಿಲುಕಿಕೊಂಡಿದ್ದ ಮೃತದೇಹವನ್ನು ಮೇಲಕ್ಕೆತ್ತಿದರು.

ಬೆಮೆತಾರಾ ಜಿಲ್ಲೆಯ ಬೆಮೆತಾರಾ ಪಟ್ಟಣದ ನಿವಾಸಿಯಾಗಿರುವ ತುಷಾರ್, ಉಪಮುಖ್ಯಮಂತ್ರಿ ಅವರ ಸಹೋದರಿಯ ಮಗ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವೈಶಾಲಿಯಲ್ಲಿ ಭಾರಿ ವಿದ್ಯುತ್​ ಅವಘಡ: ಹೈಟೆನ್ಷನ್ ತಂತಿ ತಗುಲಿ 10 ಜನ ದುರ್ಮರಣ - VAISHALI TRAGEDY

ABOUT THE AUTHOR

...view details