ಕರ್ನಾಟಕ

karnataka

ETV Bharat / bharat

ವಾರಣಾಸಿಯಲ್ಲಿ ದೇಶದ ಮೊದಲ ವೈದ್ಯಕೀಯ ಸಾಧನಗಳ ಪೂರೈಸುವ ಕೇಂದ್ರ ಸ್ಥಾಪನೆ - Medical Devices

ದೇಶದ ಮೊದಲ ವೈದ್ಯಕೀಯ ಸಾಧನಗಳ ಪೂರೈಸುವ ಕೇಂದ್ರವೊಂದನ್ನು ವಾರಣಾಸಿಯಲ್ಲಿ ಸ್ಥಾಪಿಸಲಾಗುತ್ತಿದೆ. ಇಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸಂಬಂಧಿತ ಸಾಧನಗಳು ಮತ್ತು ಉಪಕರಣಗಳು ಸಿದ್ಧವಾಗುತ್ತವೆ.

India's 1st Center Of Excellence (COE) In Medical Devices
ವಾರಣಾಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ETV Bharat)

By ETV Bharat Karnataka Team

Published : Aug 3, 2024, 3:21 PM IST

ವಾರಣಾಸಿ:ವೈದ್ಯಕೀಯ ಸಾಧನಗಳನ್ನು ಪೂರೈಸುವ ದೇಶದ ಮೊದಲ ಕೇಂದ್ರವೊಂದು ಜಿಲ್ಲೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT-BHU)ಯಲ್ಲಿ ಸ್ಥಾಪನೆಯಾಗಲಿದೆ.

ಇದು ಎಲ್ಲ ರೀತಿಯ ವೈದ್ಯಕೀಯ ಸಂಬಂಧಿತ ಸಾಧನಗಳು ಮತ್ತು ಉಪಕರಣಗಳನ್ನು ಒಂದೇ ಸೂರಿನಡಿ ಸಿದ್ಧಪಡಿಸುವ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಕೇಂದ್ರವಾಗಿ ಹೊರಹೊಮ್ಮಲಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (IMS) ಯು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)ಗೆ ಸಹಾಯ ಮಾಡಲಿದೆ. ಯೋಜನೆ ಸಿದ್ಧಪಡಿಸಲಾಗಿದ್ದು, ಸದ್ಯ ಪ್ರಗತಿಯಲ್ಲಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಈಗಾಗಲೇ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅಲ್ಲಿ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಭಾರತೀಯ ತಂತ್ರಜ್ಞಾನ ಸಂಸ್ಥೆಯು ಹೊಸ ಸಾಫ್ಟ್‌ವೇರ್​ ಅಭಿವೃದ್ಧಿಪಡಿಸುಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಇಲ್ಲಿಯವರೆಗೆ ಎಲೆಕ್ಟ್ರಾನಿಕ್ ಚಿಪ್ ವಿನ್ಯಾಸ, ಸಂವಹನಕ್ಕಾಗಿ 6G ಮತ್ತು ಕೃತಕ ಬುದ್ಧಿಮತ್ತೆ (AI) ಅಂತಹ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಇನ್ಮುಂದೆ ವೈದ್ಯಕೀಯ ಕ್ಷೇತ್ರದಲ್ಲೂ ಕಾಲೂರುತ್ತಿದ್ದು, ಅಲ್ಲಿ ವೈದ್ಯಕೀಯಕ್ಕೆ ಸಂಬಂಧಪಟ್ಟಂತೆ ವಿವಿಧ ಸಾಧನಗಳನ್ನು ಒಂದೇ ಸೂರಿನಡಿ ತಯಾರಿಸಬಹುದಾದ ಕಾರ್ಯಕ್ಕೂ ಲಗ್ಗೆ ಇಡುತ್ತಿವೆ ಎಂಬುದು ಗಮನಾರ್ಹ.

ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಐಐಟಿ-ಬಿಹೆಚ್‌ಯು ನಿರ್ದೇಶಕ ಪ್ರೊಫೆಸರ್ ಅಮಿತ್ ಪಾತ್ರಾ, ತಾವು ಅಧಿಕಾರ ವಹಿಸಿಕೊಂಡ ಬಳಿಕ ವಿಶ್ವವಿದ್ಯಾಲಯದ ಸಾಧಕ-ಬಾಧಕಗಳ ಬಗ್ಗೆ ವಿವರವಾಗಿ ಅಧ್ಯಯನ ಮಾಡಲಾಗಿದೆ. ಇಲ್ಲಿ ಪ್ರಾರಂಭಿಸಬಹುದಾದ ಹೊಸ ಯೋಜನೆಗಳ ಬಗ್ಗೆಯೂ ಚರ್ಚಿಸಲಾಗಿದೆ. ಸಾಕಷ್ಟು ಹಳೆಯದಾದ ಹಲವು ವಿಭಾಗಗಳಿವೆ. ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದೇಶದಲ್ಲಿ ವೈದ್ಯಕೀಯ ಸಾಧನಗಳನ್ನು ತಯಾರಿಸಲು ಮಾತ್ರ ಮೀಸಲಾದ ಯಾವುದೇ ಕೇಂದ್ರವಿಲ್ಲ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ನಾವು ಇ-ಮೊಬಿಲಿಟಿ ಮತ್ತು ಬಯೋ-ಮೆಡಿಕಲ್ ಸಾಧನಗಳ ಮೇಲೆ ಗಮನ ಕೇಂದ್ರೀಕರಿಬೇಕಾಗಿದೆ.

ಈ ನಿಟ್ಟಿನಲ್ಲಿ ಇ-ಇಮೊಬಿಲಿಟಿಯಲ್ಲಿ 20 ರಿಂದ 30 ಅಧ್ಯಾಪಕರೊಂದಿಗೆ ಕಾರ್ಯ ನಿರ್ವಹಿಸಲಾಗವುದು. ಇದರೊಂದಿಗೆ ಬಯೋಮೆಡಿಕಲ್ ಎಂಜಿನಿಯರಿಂಗ್ ಮತ್ತು ವೈದ್ಯಕೀಯಕ್ಕಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಮೆಡಿಕಲ್ ಡಿವೈಸ್ ಯೋಜನೆಯನ್ನು ಸಹ ಸಿದ್ಧಪಡಿಸಲಾಗುವುದು. ಅದರ ಚಟುವಟಿಕೆ ಈಗಾಗಲೇ ಆರಂಭವಾಗಿದೆ. ಇದರಲ್ಲಿ ಔಷಧ ವಿಭಾಗ, ಬಯೋಕೆಮಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ವೈದ್ಯಕೀಯ ವಿಭಾಗ ಒಟ್ಟಾಗಿ ಎಲ್ಲಾ ವೈದ್ಯಕೀಯ ಸಲಕರಣೆ ಸಾಧನಗಳನ್ನು ಸಿದ್ಧಪಡಿಸುತ್ತದೆ. ಅದರ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆ ಪ್ರಾರಂಭಿಸಲು, ನಾವು ಆರ್ಥಿಕವಾಗಿ ನಮಗೆ ಬೆಂಬಲ ನೀಡುವ ಕೆಲವು ಹೂಡಿಕೆದಾರರ ಸಹಾಯ ತೆಗೆದುಕೊಳ್ಳುತ್ತಿದ್ದೇವೆ. ಅಲ್ಲದೇ ನಾವು ಈ ವರ್ಷ 100 ಅಧ್ಯಾಪಕರನ್ನು ನೇಮಿಸಿಕೊಳ್ಳುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಅನ್ಯಗ್ರಹ ಜೀವಿಗೆ ದೇವಸ್ಥಾನ ನಿರ್ಮಿಸಿರುವ ವ್ಯಕ್ತಿ: ಸ್ವತಃ ಏಲಿಯನ್​​​ಗಳ ಜತೆಗೆ ಮಾತನಾಡಿದ್ದಾರಂತೆ! - Temple for an alien

ABOUT THE AUTHOR

...view details