- ಅಂದಾಜು 1.30 ಗಂಟೆಗೂ ಹೆಚ್ಚು ಕಾಲ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ಮೋದಿ 3.0 ಸರ್ಕಾರದ ಮೊದಲ ಬಜೆಟ್: ಕಾರ್ಪೋರೇಟ್ ಟ್ಯಾಕ್ಸ್ ಇಳಿಕೆ, ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ - Union Budget 2024 - UNION BUDGET 2024
Published : Jul 23, 2024, 9:26 AM IST
|Updated : Jul 23, 2024, 2:41 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಈ ಮೂಲಕ ತಮ್ಮ ದಾಖಲೆಯ ಸತತ 7ನೇ ಆಯವ್ಯಯ ಪ್ರಸ್ತುತಪಡಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರ ಆಕಾಂಕ್ಷೆಗಳು ಮತ್ತು ಭಾರತದ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡಿರುವುದು ಕಂಡುಬಂದಿದೆ. 9 ಆದ್ಯತೆಗಳ ಆಧಾರದ ಮೇಲೆ ಬಜೆಟ್ ಸಿದ್ಧಪಡಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆ, ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಕ್ಷೇತ್ರ, ಸಂಶೋಧನೆ-ಆವಿಷ್ಕಾರ, ಉತ್ಪಾದನೆ-ಸೇವೆಗಳು ಮತ್ತು ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ಆದ್ಯತೆ ನೀಡಲಾಗಿದೆ.
ಈ ಬಜೆಟ್‌ನಲ್ಲಿ ಆದಾಯ ತೆರಿಗೆದಾರರಿಗೆ ಹಣಕಾಸು ಸಚಿವರು ಸಿಹಿ ಸುದ್ದಿ ನೀಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್ಸ್ಗಳನ್ನು ಪರಿಷ್ಕರಿಸಲಾಗಿದೆ. ಇದರಿಂದಾಗಿ ತೆರಿಗೆದಾರರಿಗೆ ವಾರ್ಷಿಕವಾಗಿ 17,500 ರೂ. ಉಳಿತಾಯವಾಗಲಿದೆ. ಹಾಗೆಯೇ ವೇತನದಾರರ ಸ್ಟ್ಯಾಡಂರ್ಡ್ ಟ್ಯಾಕ್ಸ್ ಡಿಡಕ್ಷನ್ ಅನ್ನು 50 ಸಾವಿರ ದಿಂದ 75 ಸಾವಿರ ರೂಗೆ ಏರಿಕೆ ಮಾಡಲಾಗಿದೆ.
ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಗುರಿಯೊಂದಿಗೆ, ಸರ್ಕಾರವು ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಲು ಮುಂದಾಗಿದೆ. ಅಲ್ಲದೆ, ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಶೇ.40 ರಿಂದ ಶೇ.35ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮೊಬೈಲ್ ಫೋನ್‌ಗಳು, ಬಿಡಿಭಾಗಗಳು ಮತ್ತು ಚಾರ್ಜರ್‌ಗಳ ಮೇಲಿನ ಕಸ್ಟಮ್ ಸುಂಕವನ್ನು ಶೇ.15 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
LIVE FEED
ವೇತನದಾರರ ಸ್ಯಾಡಂರ್ಡ್ ಡಿಡಕ್ಷನ್ ಏರಿಕೆ
- ಹೊಸ ತೆರಿಗೆ ಪದ್ಧತಿಯಲ್ಲಿ ವೇತನದಾರರ ಸ್ಯಾಡಂರ್ಡ್ ಡಿಡಕ್ಷನ್ 50 ಸಾವಿರ ದಿಂದ 75 ಸಾವಿರಕ್ಕೆ ಏರಿಕೆ
- ಹೊಸ ಆದಾಯ ತೆರಿಗೆಯಲ್ಲಿ ಸ್ಲ್ಯಾಬ್ಸ್ ಘೋಷಣೆ:
- 3 ಲಕ್ಷದವರೆಗೆ 0 ತೆರಿಗೆ
- 3-7 ಲಕ್ಷಕ್ಕೆ ಶೇ.5
- 7-10 ಲಕ್ಷ ಕ್ಕೆ ಶೇ.10
- 10-12 ಲಕ್ಷಕ್ಕೆ ಶೇ.15
- 12-15 ಲಕ್ಷಕ್ಕೆ ಶೇ.20
- 15 ಲಕ್ಷ ಮೇಲಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ
ಬಜೆಟ್ ಗಾತ್ರ 32.07 ಲಕ್ಷ ಕೋಟಿ ರೂ
ಬಜೆಟ್ ಗಾತ್ರ: ಈ ಬಾರಿಯ ಕೇಂದ್ರ ಬಜೆಟ್ ಗಾತ್ರ 32.07 ಲಕ್ಷ ಕೋಟಿ ರೂ ಆಗಿದೆ. ಖರ್ಚು 48.1 ಲಕ್ಷ ಕೋಟಿ ರೂ ಇದೆ ಎಂದು ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
- FY25ಯಲ್ಲಿ ತೆರಿಗೆಯಿಂದ 25.83 ಕೋಟಿ ರೂ ಸಂಗ್ರಹ
- ವಿತ್ತೀಯ ಕೊರತೆ ಶೇ.4.5 ತಲುಪುವ ಗುರಿ
- ಕ್ಯಾನ್ಸರ್ ಕಾಯಿಲೆಯ ಇನ್ನು ಮೂರು ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ
- ಚಿನ್ನ, ಬೆಳ್ಳಿ ಮೇಲಿನ ಸುಂಕ ಶೇ.6ಕ್ಕೆ ಮತ್ತು ಪ್ಲಾಟಿನಂ ಸುಂಕ ಶೇ.6.4ಕ್ಕೆ ಇಳಿಕೆ
- 25 ವಿರಳ ಮಿನಿರಲ್ಸ್ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ
- ಮೊಬೈಲ್ ಫೋನ್ ಮತ್ತು ಅದರ ಭಾಗಗಳ ಮೇಲಿನ ಸುಂಕ ಇಳಿಕೆ. ಶೇ.15ಕ್ಕೆ ಕಡಿತ
3 ಕೋಟಿ ಮನೆ ನಿರ್ಮಾಣ
- ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ. ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ 3 ಕೋಟಿ ಮನೆಗಳ ನಿರ್ಮಾಣದ ಗುರಿ
- ಉಚಿತ ಸೌರ ವಿದ್ಯುತ್ ಯೋಜನೆ: ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರಿಂದ 1 ಕೋಟಿ ಕುಟುಂಬಗಳಿಗೆ 300 ಯೂನಿಟ್.
- ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ: ವಿಶ್ವದರ್ಜೆಯ ಪ್ರವಾಸಿತಾಣಗಳನ್ನಾಗಿಸಲು ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿಯ ಮಾದರಿಯಲ್ಲಿ ಬೋಧ ಗಯಾದ ಮಹಾಬೋಧಿ ದೇವಾಲಯ ಮತ್ತು ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಕಾರಿಡಾರ್ ನಿರ್ಮಿಸಲು ಘೋಷಣೆ.
ಆಂಧ್ರಕ್ಕೆ ವಿಶೇಷ ನೆರವು
- ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ ವಿಶೇಷ ಹಣಕಾಸು ನೆರವು ಘೋಷಣೆ. ಪ್ರಸಕ್ತ ಸಾಲಿನಲ್ಲಿ ಆಂಧ್ರಪ್ರದೇಶಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು
- ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಯೋಜನೆಗಳಿಗೆ 3 ಲಕ್ಷ ಕೋಟಿ ರೂ. ಅನುದಾನ ಮೀಸಲು
- ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ಮೀಸಲು
- ಮುದ್ರಾ ಯೋಜನೆ ಸಾಲದ ಮಿತಿ 20 ಲಕ್ಷದವರೆಗೆ ಏರಿಕೆ
- 5 ವರ್ಷಗಳಲ್ಲಿ 500 ಪ್ರಮುಖ ನಗರಗಳಲ್ಲಿ 1 ಕೋಟಿ ಯುವಕರಿಗೆ ಇಂರ್ಟನ್ಶಿಪ್ ಯೋಜನೆ ಘೋಷಣೆ
- ಉದ್ಯೋಗ ಮಾರುಕಟ್ಟೆಗೆ ಬರುವ 30 ಲಕ್ಷ ಯುವಕರಿಗೆ ಒಂದು ತಿಂಗಳ ಪಿಎಫ್ ನೀಡುವ ಮೂಲಕ ಪ್ರೋತ್ಸಾಹ
ಶಿಕ್ಷಣಕ್ಕೆ 1.48 ಲಕ್ಷ ಕೋಟಿ ಮೀಸಲು
- ಉದ್ಯೋಗ ಸೃಷ್ಟಿಗೆ ಒತ್ತು. ಉದ್ಯೋಗ ಬಯಸುವ 30 ಲಕ್ಷ ಯುವಕರಿಗೆ ಇನ್ಸೆಂಟಿವ್
- ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಸ್ಸಾ ಮತ್ತು ಆಂಧ್ರ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರ್ವೋದಯ ಯೋಜನೆ
- ಎನ್‌ಡಿಎ ಮೈತ್ರಿ ಕೂಟಗಳ ರಾಜ್ಯಗಳಿಗೆ ಭರ್ಜರಿ ಕೊಡುಗೆ
- ಶಿಕ್ಷಣ, ಉದ್ಯೋಗ, ಕೌಶಾಲ್ಯಾಭಿವೃದ್ಧಿಗೆ ಬಜೆಟ್‌ನಲ್ಲಿ 1.48 ಲಕ್ಷ ಕೋಟಿ ಮೀಸಲು
- ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ. ಇದರಿಂದ 80 ಕೋಟಿ ಜನರಿಗೆ ಅನುಕೂಲ
- ಬಡವರು, ಮಹಿಳೆಯರು, ಯುವಕರು ಮತ್ತು ರೈತರಿಗೆ ಬಜೆಟ್‌ನಲ್ಲಿ ಮೀಸಲು
1 ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ
- ಉದ್ಯೋಗ, ಕೌಶಲ್ಯವೃದ್ಧಿ, ಆರ್ಥಿಕತೆ ಬೆಳವಣಿಗೆಗೆ ಪೂರಕ ಬಜೆಟ್ ಇದಾಗಿರಲಿದ್ದು, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು ಇಡುತ್ತಿದ್ದೇವೆ.
- ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ.
- ಮುಂದಿನ ಒಂದು ವರ್ಷದಲ್ಲಿ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿ ವ್ಯಾಪ್ತಿಗೆ. ಸಾಮಾಜಿಕ ನ್ಯಾಯ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ. ಸೂಕ್ಷ್ಮ, ಸಣ್ಣ & ಮಧ್ಯಮ ಕೈಗಾರಿಕೆಗಳಿಗೆ ಪೂರಕವಾಗಿದೆ ಈ ಬಜೆಟ್ ಎಂದು ನಿರ್ಮಲಾ ಹೇಳಿದರು.
- 5 ರಾಜ್ಯಗಳಲ್ಲಿ ಕಿಸಾನ್ ಕ್ರೆಡಿಟ್ ಜಾರಿ
- ಕೃಷಿ ಕ್ಷೇತ್ರಕ್ಕಾಗಿ 1.52 ಲಕ್ಷ ಕೋಟಿ ಮೀಸಲು
ಬಜೆಟ್ ಮಂಡನೆ ಆರಂಭ
- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಆರಂಭಿಸಿದರು. ಆರಂಭದಲ್ಲಿ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಶ್ಲಾಘಿಸಿದರು.
- ಭಾರತದಲ್ಲಿ ಆರ್ಥಿಕತೆ ನಿರಂತರವಾಗಿ ಬೆಳವಣಿಗೆಯಾಗುತ್ತಿದೆ.
- ರೈತರು, ಕಾರ್ಮಿಕರಿಗೆ ಶಕ್ತಿ ನೀಡಲಾಗಿದೆ
ಸಚಿವ ಸಂಪುಟ ಸಭೆಯಲ್ಲಿ ಬಜೆಟ್ಗೆ ಅನುಮೋದನೆ
- ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ 2024-25 ಅನುಮೋದನೆ. 11 ಗಂಟೆಯಿಂದ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರಿಂದ ಆಯವ್ಯಯ ಮಂಡನೆ ಆರಂಭ.
- ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್
- ಆಯವ್ಯಯ ಮಂಡನೆ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಬಜೆಟ್ ಟ್ಯಾಬ್ಲೆಟ್ ಹಿಡಿದು ಸಂಸತ್ತಿಗೆ ಆಗಮಿಸಿದರು. ಈ ವೇಳೆ ಹಣಕಾಸು ಸಚಿವಾಲಯದ ಅಧಿಕಾರಿಗಳು ಉಪಸ್ಥಿತಿದ್ದರು.
ಹಣಕಾಸು ಸಚಿವರಿಗೆ ಸಿಹಿ ತಿನ್ನಿಸಿದ ರಾಷ್ಟ್ರಪತಿಗಳು
- ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ರಾಷ್ಟ್ರಪತಿ ಮುರ್ಮು ಅವರಿಗೆ ಬಜೆಟ್ ಕುರಿತು ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್. ಈ ವೇಳೆ ಹಣಕಾಸು ಸಚಿವರಿಗೆ ಸಿಹಿ ತಿನಿಸಿ ರಾಷ್ಟ್ರಪತಿಗಳು ಶುಭ ಹಾರೈಸಿದರು.
- ಬಳಿಕ ಹಣಕಾಸು ಅಧಿಕಾರಿಗಳ ಜೊತೆ ಸಂಸತ್ತಿಗೆ ನಿರ್ಮಲಾ ಸೀತಾರಾಮನ್ ಆಗಮಿಸಿದರು.
ರಾಷ್ಟ್ರಪತಿ ಭವನದತ್ತ ನಿರ್ಮಲಾ ಸೀತಾರಾಮನ್
ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಹಣಕಾಸು ಸಚಿವಾಲಯದ ಮುಂದೆ ನಿರ್ಮಲಾ ಸೀತಾರಾಮನ್ ಅವರು ಮಾಧ್ಯಮಗಳಿಗೆ ಬಜೆಟ್ ಟ್ಯಾಬ್ಲೆಟ್ ಪ್ರದರ್ಶಿಸಿದರು. ಬಳಿಕ ಅಲ್ಲಿಂದ ರಾಷ್ಟ್ರಪತಿ ಮುರ್ಮು ಅವರ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದರು.