ಕರ್ನಾಟಕ

karnataka

ETV Bharat / bharat

ಮಾಟಮಂತ್ರದ ಶಂಕೆ: ಎಲ್ಲರೂ ನೋಡು ನೋಡುತ್ತಿದ್ದಂತೆ ತಾಯಿ ಮಗನ ಬರ್ಬರ ಕೊಲೆ

ಮಾಟಮಂತ್ರದ ಶಂಕೆಯಿಂದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ತಾಯಿ - ಮಗನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Brutal murder  mother and son  black magic  ತಾಯಿ ಮಗನ ಬರ್ಬರ ಕೊಲೆ  ಮಾಟಮಂತ್ರದ ಶಂಕೆ
ಬರ್ಬರ ಕೊಲೆ

By ETV Bharat Karnataka Team

Published : Feb 14, 2024, 10:49 AM IST

ಮೆಹಬೂಬಾಬಾದ್, ತೆಲಂಗಾಣ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಮಾನವೀಯ ಘಟನೆಯೊಂದು ಇಬ್ಬರು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಮಾಟಮಂತ್ರದ ಶಂಕೆಯಿಂದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ತಾಯಿ ಮತ್ತು ಮಗನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಹಬೂಬಾಬಾದ್ ಜಿಲ್ಲೆಯ ಗುಡೂರಿನಲ್ಲಿ ಈ ಘಟನೆ ನಡೆದಿದೆ.

ಮೆಹಬೂಬಾಬಾದ್ ಜಿಲ್ಲೆ ಗುಡೂರು ಮಂಡಲದ ಬೊಳ್ಳೆಪಲ್ಲಿಯ ಶಿವರಾತ್ರಿ ಕುಮಾರಸ್ವಾಮಿ ಅವರ ಮನೆ ಸಮೀಪದ ಆಲಕುಂಟ್ಲ ಕೊಮರಯ್ಯ ಅವರ ಕುಟುಂಬದವರು ಮಾಟಮಂತ್ರ ಮಾಡುತ್ತಿದ್ದಾರೆ ಎಂದು ಶಂಕಿಸಿದ್ದಾರೆ. ತಮ್ಮ ವಾಮಾಚಾರದಿಂದ ತನ್ನ ತಂದೆ ಎಲ್ಲಯ್ಯ ಸಾವನ್ನಪ್ಪಿದ್ದರು. ಮಗನಿಗೆ ಮೂರ್ಛೆ ರೋಗ, ಹೆಂಡತಿ ಮಾನಸಿಕವಾಗಿ ಅಸ್ವಸ್ಥಳಾದಳು, ಅಣ್ಣನ ಹೆಂಡತಿ ಸಿಡಿಲು ಬಡಿದು ಮೃತಪಟ್ಟಳು ಎಂದು ಹಗೆತನ ಹೊಂದಿದ್ದರು.

ಮನೆಯಲ್ಲಿ ಏನೇ ಸಮಸ್ಯೆಗಳು ಕಂಡುಬಂದರೂ ಕುಮಾರಸ್ವಾಮಿ ಅವರು ಕೊಮರಯ್ಯ ಅವರ ಪತ್ನಿ ಸಮ್ಮಕ್ಕ (60) ಹಾಗೂ ಮಗ ಸಮ್ಮಯ್ಯ (40) ಅವರೇ ಕಾರಣವೆಂದು ಹಲ್ಲೆ ನಡೆಸಲು ಮುಂದಾಗುತ್ತಿದ್ದರು. ಐದು ದಿನಗಳ ಹಿಂದೆ ಸಮ್ಮಯ್ಯ ಗ್ರಾಮದಲ್ಲಿ ಆಟೋ ಓಡಿಸುತ್ತಿದ್ದಾಗ ಕುಮಾರಸ್ವಾಮಿ ಅವರ ಮುಂದೆ ಹೋಗಿ ಆಟೋಗೆ ಡಿಕ್ಕಿ ಹೊಡೆದಿದ್ದರು. ಇದರಿಂದ ಕುಮಾರಸ್ವಾಮಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಮ್ಮಯ್ಯ ಗುಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕುಮಾರಸ್ವಾಮಿ ಅವರನ್ನು ಕರೆಸಿ ಮಾತನಾಡುವುದಾಗಿ ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕೊಮರಯ್ಯ, ಅವರ ಪತ್ನಿ ಸಮ್ಮಕ್ಕ, ಮಗ ಸಮ್ಮಯ್ಯ ಮತ್ತು ಸೊಸೆ ರಜಿತಾ (ಜ್ಯೋತಿ) ಠಾಣೆಗೆ ತೆರಳಿದ್ದರು. ಕೆಲ ಸಮಯವಾದರೂ ಕುಮಾರಸ್ವಾಮಿ ಬರದ ಕಾರಣ ಆಟೋದಲ್ಲಿ ಮನೆಗೆ ವಾಪಾಸ್​ ಆಗುತ್ತಿದ್ದರು. ಆದರೆ ಗುಡೂರಿನಲ್ಲಿ ಕುಮಾರಸ್ವಾಮಿ ಸಮ್ಮಯ್ಯ ಅವರ ಆಟೋ ನಿಲ್ಲಿಸಿ ಕಬ್ಬಿಣದ ರಾಡ್​ನಿಂದ ದಾಳಿಗೆ ಮುಂದಾಗಿದ್ದಾನೆ.

ಕೊಮರಯ್ಯ ತನ್ನ ಮಗನಿಗೆ ಹೊಡೆಯದಂತೆ ಅಡ್ಡಪಡಿಸುತ್ತಿದ್ದನು. ಈ ವೇಳೆ ಕೊಮರಯ್ಯ ಮೇಲೆ ಕುಮಾರಸ್ವಾಮಿ ಹಲ್ಲೆ ನಡೆಸಿದ್ದನು. ದಾಳಿಯಲ್ಲಿ ಕೊಮರಯ್ಯ ಕೈ ಮುರಿದಿದ್ದು, ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಳಿಕ ಸಮ್ಮಯ್ಯ ಹಾಗೂ ಸಮ್ಮಕ್ಕ ಎಂಬುವವರಿಗೆ ಕಬ್ಬಿಣದ ರಾಡ್‌ನಿಂದ ಕುಮಾರಸ್ವಾಮಿ ಹೊಡೆದಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಜಿತಾ ಭಯದಿಂದ ಆಟೋ ಹಿಂದೆ ಅಡಗಿಕೊಂಡಿದ್ದಳು. ಸ್ಥಳೀಯರು ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು.

ಪ್ರತ್ಯೇಕ ಘಟನೆ, ಮಾಟಮಂತ್ರ ಮಾಡಿದ್ದಕ್ಕೆ ಕೊಲೆ?: ಮತ್ತೊಂದೆಡೆ ಮೂಢನಂಬಿಕೆ ಇನ್ನೊಂದು ಜೀವ ಸಹ ಬಲಿಯಾಗಿದೆ. ಕೊಲೆಯ ಬಳಿಕ ಆರೋಪಿಗಳು ಮೃತದೇಹವನ್ನು ನಿರ್ಜನ ಸ್ಥಳದಲ್ಲಿ ಸುಟ್ಟು ಹಾಕಲು ಯತ್ನಿಸಿ ಓಡಿ ಹೋಗಿದ್ದಾರೆ. ಆರೋಪಿಗಳನ್ನು ಸಿದ್ದಿಪೇಟೆ ಪೊಲೀಸರು ಬಂಧಿಸಿದ್ದಾರೆ. ಸಿಐ ಶ್ರೀನಿವಾಸ್ ನೀಡಿರುವ ವಿವರದ ಪ್ರಕಾರ, ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಮುಸ್ತಾಬಾದ್ ತಾಲೂಕಿನ ನಾಮಾಪುರ ಮೂಲದ ಭೂಮಯ್ಯ ಮತ್ತು ಕನಕಯ್ಯ ಸಹೋದರರು. ಭೂಮಯ್ಯ ಅವರು ಸಿದ್ದಿಪೇಟೆಯಲ್ಲಿ ಕುರಿ ವ್ಯಾಪಾರ ಮಾಡಿಕೊಂಡುವ ಜೀವನ ಸಾಗಿಸುತ್ತಿದ್ದಾರೆ. ಅವರ ತಾಯಿ ಕನಕಯ್ಯ ಅವರ ಬಳಿಯೇ ಇದ್ದಾರೆ. ಆಕೆ ಹಾಗೂ ಕನಕಯ್ಯ ಅವರ ಕುಟುಂಬ ಸದಸ್ಯರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭೂಮಯ್ಯ ಮತ್ತು ಅವರ ಪುತ್ರ ಪ್ರವೀಣ್ ಅವರು ಫೆ.8 ರಂದು ಕನಕಯ್ಯ ಅವರ ಮನೆಗೆ ಭೇಟಿ ನೀಡಲು ಸಿದ್ದಿಪೇಟೆಯಿಂದ ನಾಮಾಪುರಕ್ಕೆ ಬಂದಿದ್ದರು. ಭೂಮಯ್ಯ ಮಾಟಮಂತ್ರ ಮಾಡುತ್ತಿದ್ದಾನೆ ಎಂಬ ಶಂಕೆಯಿಂದ ಸಹೋದರರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕನಕಯ್ಯ ಮತ್ತು ಪ್ರವೀಣ್ ಭೂಮಯ್ಯನನ್ನು ಕೊಲ್ಲಲು ನಿರ್ಧರಿಸಿದ್ದರು.

ಸಿದ್ದಿಪೇಟೆಯಲ್ಲಿ ವ್ಯಕ್ತಿ ಹತ್ಯೆ:ಮದ್ಯ ಕುಡಿಯಲು ಮೂವರು ದ್ವಿಚಕ್ರ ವಾಹನದಲ್ಲಿ ಸಿದ್ದಿಪೇಟೆ ಕಡೆಗೆ ಹೊರಟರು. ಅದೇ ದಿನ ರಾತ್ರಿ ರಾಘವಾಪುರದ ಅರಣ್ಯ ಪ್ರದೇಶದಲ್ಲಿ ಮೂವರು ಮದ್ಯ ಸೇವಿಸಿದ್ದಾರೆ. ಭೂಮಯ್ಯ ಅವರಿಗೆ ಮದ್ಯದಲ್ಲಿ ಕೀಟನಾಶಕ ಬೆರೆಸಿ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಈ ವೇಳೆ ಆರೋಪಿಗಳು ಟವೆಲ್​​ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಮೃತ ದೇಹಕ್ಕೆ ಹುಲ್ಲು ಹಾಕಿ ಬೆಂಕಿ ಹಚ್ಚಿ ಓಡಿ ಹೋಗಿದ್ದರು. ನಂತರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿ ಸಿದ್ದಿಪೇಟೆಯ ನಾಗದೇವತೆ ದೇವಸ್ಥಾನದ ಪ್ರದೇಶದಲ್ಲಿ ಬಂಧಿಸಿದರು. ಈ ಘಟನೆ ಕುರಿತು ಸಿದ್ದಿಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ:ರಾಜ್ಯ ಬಜೆಟ್ 2024: ಧಾರವಾಡ ರೈತಾಪಿ ವರ್ಗ, ಉದ್ಯಮಿ, ನಾಗರಿಕರಿಂದ ಬೆಟ್ಟದಷ್ಟು ನಿರೀಕ್ಷೆ

ABOUT THE AUTHOR

...view details