ಕರ್ನಾಟಕ

karnataka

ETV Bharat / bharat

'25 ವರ್ಷಗಳ ನಂತರ ದೆಹಲಿ ಗದ್ದುಗೆ ಏರಲಿದೆ ಬಿಜೆಪಿ': ಎಕ್ಸಿಟ್​ ಪೋಲ್ ವರದಿ - DELHI EXIT POLL RESULTS 2025

ಈ ಬಾರಿ ದೆಹಲಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.

'25 ವರ್ಷಗಳ ನಂತರ ದೆಹಲಿ ಗದ್ದುಗೆ ಏರಲಿದೆ ಬಿಜೆಪಿ': ಎಕ್ಸಿಟ್​ ಪೋಲ್ ವರದಿ
ದೆಹಲಿ ವಿಧಾನಸಭಾ ಚುನಾವಣೆ-2025 (IANS)

By ETV Bharat Karnataka Team

Published : Feb 5, 2025, 7:29 PM IST

Updated : Feb 5, 2025, 8:22 PM IST

ನವದೆಹಲಿ: 25 ವರ್ಷಗಳ ಸುದೀರ್ಘಾವಧಿಯ ನಂತರ ಈ ಬಾರಿ ಬಿಜೆಪಿ ದೆಹಲಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

2025ರ ದೆಹಲಿ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಮುನ್ನಡೆಯನ್ನು ಸೂಚಿಸಿದರೆ, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಗಮನಾರ್ಹ ಹಿನ್ನಡೆ ಅನುಭವಿಸಲಿದೆ.

ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, 70 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 43ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಇದು 70 ಸದಸ್ಯರ ವಿಧಾನಸಭೆಯಲ್ಲಿ ಬಹುಮತದ 36ಕ್ಕಿಂತ ಹೆಚ್ಚಾಗಿದೆ.

ಕಾಂಗ್ರೆಸ್ ಕಳಪೆ ಸಾಧನೆ ಸಾಧ್ಯತೆ: ಎಎಪಿ ಸುಮಾರು 26 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ ಕೇವಲ 1 ರಿಂದ 2 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಬಹುದು ಎಂದು ಸಮೀಕ್ಷೆಗಳು ಊಹಿಸಿವೆ.

ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ (ETV Bharat)

ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ಹೀಗಿವೆ:

ಚಾಣಕ್ಯ ಸ್ಟ್ರಾಟಜಿಸ್ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ:

ಬಿಜೆಪಿ: 39-44

ಎಎಪಿ: 25-28

ಕಾಂಗ್ರೆಸ್: 2-3

ಪಿ-ಮಾರ್ಕ್ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ:

ಎಎಪಿ: 21-31

ಬಿಜೆಪಿ: 39-49

ಕಾಂಗ್ರೆಸ್: 0-1

ಜೆವಿಸಿ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ:

ಬಿಜೆಪಿ: 39-45

ಎಎಪಿ: 22-31

ಕಾಂಗ್ರೆಸ್: 0-2

ಪೀಪಲ್ಸ್ ಇನ್ ಸೈಟ್ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ:

ಎಎಪಿ: 25-29

ಬಿಜೆಪಿ: 40-44

ಕಾಂಗ್ರೆಸ್: 0-2

ಮೆಟ್ರಿಜ್ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ

ಬಿಜೆಪಿ: 35-40

ಎಎಪಿ: 32-37

ಕಾಂಗ್ರೆಸ್: 0-1

ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ

ಬಿಜೆಪಿ: 51-60

ಎಎಪಿ: 10-19

ಕಾಂಗ್ರೆಸ್: 0

ಉತ್ತಮ ಸಾಧನೆ ತೋರಲಿದೆಯಾ ಬಿಜೆಪಿ?: ಈ ಭವಿಷ್ಯವಾಣಿಗಳು ನಿಜವೇ ಆದರೆ ಎಎಪಿಯ ಭದ್ರಕೋಟೆಯನ್ನು ಉರುಳಿಸುವ ಮೂಲಕ ಎರಡು ದಶಕಕ್ಕೂ ಹೆಚ್ಚು ಸಮಯದ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಲಿದೆ. ರಾಷ್ಟ್ರೀಯ ಭದ್ರತೆ, ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾದ ಪಕ್ಷದ ಪ್ರಚಾರವು ಮತದಾರರನ್ನು ಸೆಳೆಯಲು ಯಶಸ್ವಿಯಾಗಿರಬಹುದು ಎಂದು ಊಹಿಸಲಾಗಿದೆ.

ಎಎಪಿ ಕೋಟೆ ಕುಸಿಯುತ್ತಿದೆಯಾ?: 2020 ರಲ್ಲಿ 70 ಸ್ಥಾನಗಳ ಪೈಕಿ 62 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ದೊಡ್ಡ ಹಿನ್ನಡೆ ಎದುರಿಸಲಿದೆ ಎಂದು ಸಮೀಕ್ಷೆಗಳು ಊಹಿಸಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಯತ್ನಗಳ ಹೊರತಾಗಿಯೂ, ಪಕ್ಷವು ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸಂಜೆ 5ಕ್ಕೆ ಶೇ 57.70ರಷ್ಟು ವೋಟಿಂಗ್‌

Last Updated : Feb 5, 2025, 8:22 PM IST

ABOUT THE AUTHOR

...view details