ಕರ್ನಾಟಕ

karnataka

ETV Bharat / bharat

ವದಂತಿ ಹರಡಿ ಅದನ್ನ ಸತ್ಯವೆಂದು ತೋರಿಸುವುದು ಬಿಜೆಪಿಗೆ ಅಭ್ಯಾಸವಾಗಿದೆ: ಸಿಎಂ ಸ್ಟಾಲಿನ್ ಆರೋಪ - TN CM Stalin

ಬಿಜೆಪಿಯ ಉನ್ನತ ಸ್ಥಾನದಲ್ಲಿರುವವರು ವಾಟ್ಸ್​ಆ್ಯಪ್​, ಇತರ ಸಾಮಾಜಿಕ ಮಾಧ್ಯಮಗಳು ಮತ್ತು ದೂರದರ್ಶನದಲ್ಲಿ ವದಂತಿಯನ್ನು ಹರಡಿ ಅದನ್ನು ಸತ್ಯವೆಂದು ತೋರಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಅವರು ಆರೋಪಿಸಿದ್ದಾರೆ.

ಸಿಎಂ ಸ್ಟಾಲಿನ್
ಸಿಎಂ ಸ್ಟಾಲಿನ್

By ETV Bharat Karnataka Team

Published : Jan 22, 2024, 10:35 PM IST

ಚೆನ್ನೈ( ತಮಿಳುನಾಡು): ರಾಮ ಮಂದಿರ ಉದ್ಘಾಟನೆಯ ದಿನದಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತದಲ್ಲಿರುವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನದಾನ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ಸುಳ್ಳು ಸಂದೇಶವನ್ನು ಹಬ್ಬಿಸಲಾಗಿದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಅವರು ಕಿಡಿಕಾರಿದ್ದಾರೆ.

ಬಿಜೆಪಿಯ ಉನ್ನತ ಸ್ಥಾನದಲ್ಲಿರುವವರು ವಾಟ್ಸ್​ಆ್ಯಪ್​ , ಇತರ ಸಾಮಾಜಿಕ ಮಾಧ್ಯಮಗಳು ಮತ್ತು ದೂರದರ್ಶನದಲ್ಲಿ ವದಂತಿಯನ್ನು ಹರಡಿ ಅದನ್ನು ಸತ್ಯವೆಂದು ತೋರಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಚಿಪುರಂ ಕಾಮಚಿ ಅಮ್ಮನ್ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ವೇಳೆ ವಿಡಿಯೋ ದೃಶ್ಯಗಳನ್ನು ಪ್ರಸಾರ ಮಾಡುವುದನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ನಿಷೇಧಿಸಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಭಜನಾ ಕಾರ್ಯಕ್ರಮಕ್ಕೆ ಅನುಮತಿ ಕೋರಿದವರು ಯಾವುದೇ ವಿಡಿಯೊ ದೃಶ್ಯಾವಳಿಗಳನ್ನು ಪ್ರದರ್ಶಿಸುವುದಿಲ್ಲ ಎಂದು ಹೇಳಿ ಅನುಮತಿ ಕೋರಿದ್ದಾರೆ. ಇದನ್ನು ಮರೆಮಾಚಿ ಕೇಂದ್ರ ಹಣಕಾಸು ಸಚಿವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇಲ್ಲ ಇದು ಯೋಜಿತ ವದಂತಿ ಎಂಬುದು ಬೆಳಗಾಗುವ ಮುನ್ನವೇ ಬಯಲಾಗಿದೆ ಎಂದಿದ್ದಾರೆ.

ಈ ನಡುವೆ ಈ ಸುಳ್ಳು ಪ್ರಚಾರವನ್ನು ಸ್ವತಃ ಮದ್ರಾಸ್ ಹೈಕೋರ್ಟ್ ಖಂಡಿಸಿದ್ದು, ತಮಿಳುನಾಡು ಶಾಶ್ವತವಾಗಿ ಶಾಂತಿಯ ಉದ್ಯಾನವನವನ್ನಾಗಿಸಲು ಬಯಸುವ ಧಾರ್ಮಿಕ ಸೌಹಾರ್ದ ಮನೋಭಾವದವರು ಇದನ್ನು ಗಮನಿಸಬೇಕು ಎಂದು ಹೇಳಿದೆ. ಭಕ್ತಿಯು ಸಂತೋಷ ಮತ್ತು ಶಾಂತಿಗಾಗಿ ಮಾತ್ರ. ‘ಸಮಾಜದಲ್ಲಿ ಸಮತೋಲನವನ್ನು ಹಾಳು ಮಾಡುವುದಕ್ಕಾಗಿ ಅಲ್ಲ’ ಎಂದು ಖಂಡನೆ ವ್ಯಕ್ತಪಡಿಸಿದ ಹೈಕೋರ್ಟ್, ವಿಶೇಷ ಪೂಜೆಗಳಿಗೆ ನಿಷೇಧ ಇಲ್ಲದಿದ್ದರೂ ಸುಳ್ಳು ಪ್ರಚಾರ ಮಾಡಿ ಕಾನೂನು ಸುವ್ಯವಸ್ಥೆ ಅವ್ಯವಸ್ಥೆಗೆ ದಾರಿ ಮಾಡಿಕೊಡಬಾರದು ಎಂದು ತಾಕೀತು ಮಾಡಿದೆ.

ಇದನ್ನೂ ಓದಿ: 'ಸಿಎಂ ಆಗಿದ್ದಾಗ ರಾಜ್ಯದ ಹಕ್ಕುಗಳ ಕುರಿತು ಭಾಷಣ.. ಪ್ರಧಾನಿಯಾದ ನಂತರ ಸ್ವಾಯತ್ತತೆಗೆ ವಿರೋಧ..': ಪ್ರಧಾನಿ ಪ್ರಶ್ನಿಸಿದ ಸಿಎಂ ಸ್ಟಾಲಿನ್

ಇಂದು ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತಮಿಳುನಾಡು, ಕರ್ನಾಟಕ ಸೇರಿದಂತೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಸರ್ಕಾರಿ ರಜೆ ಘೋಷಣೆ ಮಾಡಿರಲಿಲ್ಲ. ಇದು ರಾಮಭಕ್ತರು, ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಸಂಬಂಧ ರಾಮಭಕ್ತರು ಸ್ಟಾಲಿನ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಇನ್ನೊಂದೆಡೆ ಈ ವಿಚಾರ ಕೋರ್ಟ್​ ಮೆಟ್ಟಿಲು ಕೂಡಾ ಏರಿತ್ತು. ಇದೀಗ ಇದಕ್ಕೆ ತಮಿಳುನಾಡು ಸರ್ಕಾರ ಸ್ಪಷ್ಟನೆಯನ್ನೂ ಕೂಡಾ ನೀಡಿದೆ. ದೇವಾಲಯಗಳಲ್ಲಿ ಪೂಜೆಗೆ ಯಾವುದೇ ನಿರ್ಬಂಧ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಮತ್ತೊಂದೆಡೆ ಸುಳ್ಳು ಸುದ್ದಿ ಹರಡಿಸುವವರಿಗೆ ತಮಿಳುನಾಡು ಹೈಕೋರ್ಟ್​ ಸಹ ತರಾಟೆಗೆ ತೆಗೆದುಕೊಂಡಿದೆ.

ABOUT THE AUTHOR

...view details