ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅತ್ಯಾಚಾರ ವಿರೋಧಿ ಮಸೂದೆ ಮಂಡನೆ - West Bengal Anti Rape Bill - WEST BENGAL ANTI RAPE BILL

ಈ ಮಸೂದೆಯಲ್ಲಿ ಅತ್ಯಾಚಾರ ಅಪರಾಧಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವ ಕುರಿತು ಪ್ರಸ್ತಾಪಿಸಲಾಗಿದೆ.

bengal-govt-tables-anti-rape-bill-at-state-assembly
ಸಿಎಂ ಮಮತಾ ಬ್ಯಾನರ್ಜಿ (ANI)

By PTI

Published : Sep 3, 2024, 2:04 PM IST

ಕೋಲ್ಕತ್ತಾ: ಎರಡು ದಿನಗಳ ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನದಲ್ಲಿಂದು ಪಶ್ಚಿಮ ಬಂಗಾಳ ಕಾನೂನು ಸಚಿವ ಮೊಲಾಯ್​​​ ಘಾಟಕ್​ ಅವರು ಅತ್ಯಾಚಾರ ವಿರೋಧಿ ಮಸೂದೆ ಮಂಡಿಸಿದರು.

ಈ ಮಸೂದೆ ಕುರಿತು ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಯಲಿದೆ. ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಜೊತೆಯಲ್ಲಿ ಬಿಜೆಪಿ ಶಾಸಕ ಸಿಖಾ ಚಟರ್ಜಿ ಮತ್ತು ಅಗ್ನಿಮಿತ್ರ ಪೌಲ್​ ಮಾತನಾಡಲಿದ್ದಾರೆ. ಸರ್ಕಾರದಿಂದ ಸಂಸದೀಯ ವ್ಯವಹಾರ ಸಚಿವ ಸೊಭಂಬೆದ್​ ಚಟ್ಟೋಪಾಧ್ಯಯ್​ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡುವರು.

ಮಸೂದೆಯಲ್ಲಿ ಅತ್ಯಾಚಾರ ಅಪರಾಧಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಜೊತೆಗೆ, ಅತ್ಯಾಚಾರದಂತಹ ಹೇಯಕೃತ್ಯ ಎಸಗುವ ಅಪರಾಧಿಗಳಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆ ವಿಧಿಸುವ ಕುರಿತು ಕೂಡಾ ಉಲ್ಲೇಖಿಸಲಾಗಿದೆ.

ಅಪರಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಅಪರಾಧ ಕಾನೂನು ಮತ್ತು ತಿದ್ದುಪಡಿ) ಮಸೂದೆ 2024ರ ಶೀರ್ಷಿಕೆಯಡಿ ಮಸೂದೆ ಮಂಡಿಸಲಾಗಿದೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಯನ್ನು ಬಲಗೊಳಿಸುವ ಗುರಿಯನ್ನು ಇದು ಹೊಂದಿದೆ.

ಮಸೂದೆಯ ಪ್ರಮುಖಾಂಶಗಳು ಹೀಗಿವೆ: ಮಸೂದೆಯು ಈಗಿರುವ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2024 ಮತ್ತು ಪೋಕ್ಸೊ 2012 ಸೇರಿದಂತೆ ಕಾನೂನಿಗೆ ತಿದ್ದುಪಡಿ ಪ್ರಸ್ತಾವನೆ ಮಾಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಹೀನ ಕೃತ್ಯ ಎಸಗಿದವರಿಗೆ ಕಠಿಣ ಕಾನೂನು ಮತ್ತು ತ್ವರಿತ ತನಿಖೆಯನ್ನು ಒಳಗೊಂಡಿದೆ.

ಸಂತ್ರಸ್ತೆಯ ಗುರುತು ಬಹಿರಂಗಪಡಿಸುವವರಿಗೆ ಮೂರರಿಂದ ಐದು ವರ್ಷದ ಶಿಕ್ಷೆ ಜೊತೆಗೆ ಭಾರಿ ದಂಡ ಹಾಕಲಾಗುತ್ತದೆ. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಯ ಕುರಿತು ಅನಧಿಕೃತ ಪ್ರಕಟಣೆಗಳಿಗೆ ಕಠಿಣ ದಂಡ ವಿಧಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣದ ತನಿಖೆಗೆ ಡಿಎಸ್​ಪಿ ನೇತೃತ್ವದಲ್ಲಿ ಅಪರಾಜಿತಾ ಟಾಸ್ಕ್​ ಫೋರ್ಸ್​ ರಚನೆ ಕುರಿತ ಅಂಶಗಳು ಮಸೂದೆಯಲ್ಲಿವೆ.

ಆರ್.​ಜಿ.ಕರ್​ ವೈದ್ಯಕೀಯ ಕಾಲೇಜು​ ಮತ್ತು ಆಸ್ಪತ್ರೆಯಲ್ಲಿ ಇತ್ತೀಚಿಗೆ ನಡೆದ ಕಿರಿಯ ಮಹಿಳಾ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಭಾರಿ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹಿಳೆಯರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ: ಇಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಸೂದೆ ಮಂಡನೆ

ABOUT THE AUTHOR

...view details