ಹೈದರಾಬಾದ್:ಹೈದರಾಬಾದ್‌ನ ಬಂಡ್ಲಗುಡದಲ್ಲಿರುವ ಕೀರ್ತಿ ರಿಚ್ಮಂಡ್ ವಿಲ್ಲಾದ ಗಣೇಶ ಲಡ್ಡು ಸೋಮವಾರ ತಡರಾತ್ರಿ ನಡೆದ ಹರಾಜಿನಲ್ಲಿ ದಾಖಲೆಯ 1.87 ಕೋಟಿ ರೂ.ಗೆ ಮಾರಾಟವಾಯಿತು. ಈ ಮೂಲಕ ತೆಲಂಗಾಣದ ಅತ್ಯಂತ ದುಬಾರಿ ಲಡ್ಡು ಎಂಬ ಮನ್ನಣೆಗೆ ಪಾತ್ರವಾಗಿದೆ.
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ನಡೆದ ಹರಾಜಿನಲ್ಲಿ ಲಡ್ಡು 1,87,36,500 ರೂ.ಗೆ ಮಾರಾಟವಾಗಿದೆ. ಆದರೆ ಖರೀದಿದಾರರ ಹೆಸರನ್ನು ಸಂಘಟಕರು ಬಹಿರಂಗಪಡಿಸಿಲ್ಲ. 2023ರಲ್ಲಿ ಈ ಲಡ್ಡು 1.26 ಕೋಟಿ ರೂ.ಗೆ ಹರಾಜಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ 61 ಲಕ್ಷ ರೂ. ಹೆಚ್ಚು ಬೆಲೆಗೆ ಹರಾಜಾಗಿದೆ.
ಕಳೆದ ಕೆಲವು ವರ್ಷಗಳಿಂದ ತೆಲಂಗಾಣ ರಾಜ್ಯದ ಗಣೇಶ ಚತುರ್ಥಿ ಆಚರಣೆಯಲ್ಲಿ ಕೀರ್ತಿ ರಿಚ್ಮಂಡ್ ವಿಲ್ಲಾದ ಲಡ್ಡು ಅತ್ಯಂತ ದುಬಾರಿ ಬೆಲೆ ಹರಾಜಾಗುವ ಲಡ್ಡಾಗಿದೆ. 2022ರಲ್ಲಿ ಲಡ್ಡು 60 ಲಕ್ಷ ರೂಪಾಯಿಗೆ ಹರಾಜಾಗಿತ್ತು.
ಸೇವಾ ಚಟುವಟಿಕೆಗಳಿಗೆ ಹಣ ಬಳಕೆ: ಕಳೆದ 11 ವರ್ಷಗಳಿಂದ ಕೀರ್ತಿ ರಿಚ್ಮಂಡ್ ವಿಲ್ಲಾದಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ವಿಲ್ಲಾದಲ್ಲಿರುವವರು ಮಾತ್ರ ಭಾಗವಹಿಸುತ್ತಾರೆ. ಲಡ್ಡು ಯಾರಿಗೆ ಸಿಕ್ಕರೂ ಎಲ್ಲರೂ ಸೇರಿ ಆ ಹಣವನ್ನು ಸೇವಾ ಚಟುವಟಿಕೆಗಳಿಗೆ ಬಳಸುತ್ತಾರೆ. ಒಂದು ರುಪಾಯಿಯನ್ನೂ ಕೂಡ ವೈಯಕ್ತಿಕ ಅಗತ್ಯಗಳಿಗೆ ಬಳಸುವುದಿಲ್ಲ ಎಂಬುದು ವಿಶೇಷ.
ಇದನ್ನೂ ಓದಿ:ಬೆಂಗಳೂರು: ಗಣೇಶ ಲಡ್ಡು 4.5 ಲಕ್ಷ ರೂ.ಗೆ ಹರಾಜು, ಬಿಜೆಪಿ ಮುಖಂಡನಿಂದ ಖರೀದಿ - Ganesh Laddu Auction