ಅಯೋಧ್ಯೆ(ಉತ್ತರ ಪ್ರದೇಶ):ಇನ್ನು ಕೆಲವೇ ಗಂಟೆಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಹಲವು ವರ್ಷಗಳಿಂದ ಇಡೀ ದೇಶವೇ ಈ ಅಮೃತ ಗಳಿಗೆಗಾಗಿ ಅತ್ಯಂತ ಕಾತರತೆಯಿಂದ ಕಾಯುತ್ತಿದೆ. ಆದರೆ ಇದ್ಯಾವುದೂ ಅಷ್ಟು ಸುಲಭ ಸಾಧ್ಯವಾಗಲಿಲ್ಲ. ಇದರ ಹಿಂದೆ ಶತಮಾನಗಳ ಇತಿಹಾಸವಿದೆ. ಅನೇಕ ಸಂಘರ್ಷ, ಸಾವು-ನೋವುಗಳಿವೆ. ಆದರೆ ಇವೆಲ್ಲವನ್ನೂ ಮೆಟ್ಟಿನಿಂತು ರಾಮನಿಗೆ ಸರ್ವಾಂಗ ಸುಂದರ ದೇಗುವ ನಿರ್ಮಿಸುವ ಪ್ರಯತ್ನ ಕೊನೆಗೂ ಈಡೇರಿದೆ. ಇದರೊಂದಿಗೆ ಕೋಟ್ಯಂತರ ಹಿಂದೂಗಳ ಕನಸು ನನಸಾಗುತ್ತಿದೆ.
ಅಯೋಧ್ಯೆ ವಿವಾದ:ಅಯೋಧ್ಯೆ ಸಂಘರ್ಷ 1528ರಲ್ಲಿ ಪ್ರಾರಂಭವಾಯಿತು. ಅದು ಮೊಘಲರು ಭಾರತವನ್ನು ಆಳುತ್ತಿದ್ದ ಕಾಲ. ಬಾಬರನ ಆಳ್ವಿಕೆಯಲ್ಲಿ ಕಮಾಂಡರ್ ಆಗಿದ್ದ ಮೀರ್ ಬಾಖಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸಿದನು. ರಾಮಾಯಣದಂತೆ, ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ. ಮೀರ್ ಬಾಖಿ ಬಾಬರಿ ಮಸೀದಿಯನ್ನು ನಿರ್ಮಿಸಿದ ನಿಖರವಾದ ಸ್ಥಳದಲ್ಲೇ ಬಾಲರಾಮ ಜನಿಸಿದರು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಮಸೀದಿ ನಿರ್ಮಾಣವಾದಾಗ ಘರ್ಷಣೆಗಳು ಪ್ರಾರಂಭವಾದವು. ನಂತರದಲ್ಲಿ, ಅಂದರೆ 1843ರಿಂದ 1949ರವರೆಗೆ ಮಸೀದಿಯ ಸುತ್ತ ಅನೇಕ ವಿವಾದಗಳು ನಡೆದವು. 1853 ಮತ್ತು 1859ರಲ್ಲಿ ಈ ವಿವಾದ ಭುಗಿಲೆದ್ದಿತು. ಆಗಿನ ಬ್ರಿಟಿಷ್ ಸರ್ಕಾರ ಅಯೋಧ್ಯೆಯ ಪ್ರದೇಶದ ಸುತ್ತಲೂ ಬೇಲಿಗಳನ್ನು ಹಾಕಿತು. ಈ ಸ್ಥಳದಲ್ಲಿದ್ದ ಮಸೀದಿಯ ಒಳಗೆ ಮುಸ್ಲಿಮರು ಮತ್ತು ಹೊರಗೆ ಹಿಂದೂಗಳಿಗೆ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಯಿತು.
ಸ್ವಾತಂತ್ರ್ಯಾ ನಂತರದ ಸಂಘರ್ಷ:1949ರಲ್ಲಿ ಭಾರತದ ಸ್ವಾತಂತ್ರ್ಯವಾದ ನಂತರ ಈ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿತು. ಹಿಂದೂಗಳು ಬಾಬರಿ ಮಸೀದಿಯಲ್ಲಿ ಬಾಲರಾಮನ ವಿಗ್ರಹವಿದೆ ಎಂದು ಹೇಳಲು ಪ್ರಾರಂಭಿಸಿದರು. ಧಾರ್ಮಿಕ ಘರ್ಷಣೆಗಳು ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಗಿನ ಸರ್ಕಾರ ಇದನ್ನು 'ವಿವಾದಾತ್ಮಕ ಸ್ಥಳ'ವೆಂದು ಘೋಷಿಸಿತು. ಬಾಗಿಲುಗಳು ಮುಚ್ಚಿದವು. 1984ರಲ್ಲಿ ವಿಶ್ವ ಹಿಂದೂ ಪರಿಷತ್ ಈ ಸ್ಥಳವನ್ನು ಮುಕ್ತಗೊಳಿಸಿ ರಾಮಮಂದಿರ ನಿರ್ಮಾಣಕ್ಕಾಗಿ ಚಳುವಳಿ ಪ್ರಾರಂಭಿಸಿತು.
ಫೆಬ್ರವರಿ 1, 1986ರಂದು ಫೈಜಾಬಾದ್‌ನ ಜಿಲ್ಲಾ ನ್ಯಾಯಾಧೀಶರು ಬೀಗಗಳನ್ನು ತೆಗೆಯಲು ಆದೇಶಿಸಿದರು. ಹಿಂದೂಗಳು ಒಳಗೆ ಹೋಗಿ ಪೂಜೆ ಮಾಡಬಹುದು ಎಂದು ಹೇಳಿದರು. ಅಪ್ಪಾಡೆ ಬಾಬರಿ ಮಸೀದಿ ಕ್ರಿಯಾ ಸಮಿತಿ ರಚಿಸಲಾಗಿತ್ತು. 1990ರಲ್ಲಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಲು ಸೋಮನಾಥದಿಂದ ರಥಯಾತ್ರೆ ಕೈಗೊಂಡರು. ಡಿಸೆಂಬರ್ 6, 1992ರಂದು ಕೆಲವು ಕಾರ್ಯಕರ್ತರು ಬಾಬರಿ ಮಸೀದಿಯನ್ನು ಕೆಡವಿದರು. ಇದು ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತು. ಇದರಿಂದಾಗಿ ಹಲವೆಡೆ ಧಾರ್ಮಿಕ ಘರ್ಷಣೆ ನಡೆಯಿತು. ಅಯೋಧ್ಯೆ ಮಾತ್ರವಲ್ಲದೇ ಹಲವೆಡೆ ಸಾವಿರಾರು ಜನರು ಸಾವನ್ನಪ್ಪಿದರು.