ಕರ್ನಾಟಕ

karnataka

ETV Bharat / bharat

ಬಂಗಾಳ ಬಿಜೆಪಿ ನಾಯಕನ ವಾಹನದ ಮೇಲೆ ದಾಳಿ: 12 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ - NATIONAL INVESTIGATION AGENCY

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕನ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ 12 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ದಾಖಲಿಸಿದೆ.

ಬಂಗಾಳ ಬಿಜೆಪಿ ನಾಯಕನ ವಾಹನದ ಮೇಲೆ ದಾಳಿ
ಬಂಗಾಳ ಬಿಜೆಪಿ ನಾಯಕನ ವಾಹನದ ಮೇಲೆ ದಾಳಿ (ETV Bharat)

By PTI

Published : Nov 26, 2024, 9:05 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ):ಈ ವರ್ಷದ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳದ ಭಾತ್ಪಾರಾ ಪ್ರದೇಶದಲ್ಲಿ ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ ಮತ್ತು ಅವರ ಸಹಚರರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ 12 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.

ಮೊಹಮದ್​ ಅಬೇದ್ ಖಾನ್ ಅಲಿಯಾಸ್ ಬಂಟಿ, ಎಂಡಿ ಆರಿಫ್, ವಾಸಿಮುದ್ದೀನ್ ಅನ್ಸಾರಿ ಅಲಿಯಾಸ್ ಭೂಮಾ, ಎಂಡಿ ನಾಸಿಮ್, ಫಿರ್ದುಷ್ ಇಕ್ಬಾಲ್, ಮೊಹಮದ್​ ತನ್ವೀರ್, ಸಂಜಯ್ ಶಾ, ಮೊಹಮದ್​ ಚಂದ್, ಆಕಾಶ್ ಸಿಂಗ್, ಮೊಹಮದ್​ ಸೊಹೈಬ್ ಅಕ್ತರ್, ಮೊಹಮದ್​ ಅಕ್ಬರ್ ಮತ್ತು ಸಾಗರ್ ಸಿಂಗ್ ಎಂಬುವರನ್ನು ಆರೋಪಿಗಳು ಎಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ, ಈ ದಾಳಿಯನ್ನು ಕ್ರಿಮಿನಲ್ ಪಿತೂರಿ ಎಂದು ಹೇಳಲಾಗಿದೆ. ಎನ್‌ಐಎ ನಡೆಸಿದ ತನಿಖೆಯಿಂದ ಎಲ್ಲ 12 ಆರೋಪಿಗಳು ಬಿಜೆಪಿ ನಾಯಕ ಪಾಂಡೆ ಅವರ ಪರಿವಾರದ ಮೇಲಿನ ಹಲ್ಲೆಗೆ ಸಂಬಂಧಿಸಿದ ಪಿತೂರಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಅಂದು ಏನಾಗಿತ್ತು?:ಆಗಸ್ಟ್ 28 ರಂದು ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ ಅವರು ತನ್ನ ಸಹಚಚರೊಂದಿಗೆ ವಾಹನದಲ್ಲಿ ತೆರಳುತ್ತಿದ್ದಾಗ, ಭಾತ್ಪಾರಾದ ಆಂಗ್ಲೋ ಇಂಡಿಯನ್ ಜೂಟ್ ಮಿಲ್ ಸ್ಟಾಫ್​ ಕ್ವಾರ್ಟರ್ಸ್ ಗೇಟ್ ನಂಬರ್ 3ರ ಬಳಿ ಗುಂಪೊಂದು ಮಾರಕಾಸ್ತ್ರ ಮತ್ತು ಬಂದೂಕಿನಿಂದ ದಾಳಿ ಮಾಡಿತ್ತು. ಬಿಜೆಪಿ ನಾಯಕನ ವಾಹನದ ಮೇಲೆ ಗುಂಡು ಹಾರಿಸಲಾಗಿತ್ತು. ದಾಳಿಯಲ್ಲಿ ವಾಹನ ಚಾಲಕ ರವಿ ವರ್ಮಾ ಮತ್ತು ಆಪ್ತ ಸಹಾಯಕ ರಬಿ ಸಿಂಗ್ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದರು.

ಪ್ರಿಯಾಂಗು ಪಾಂಡೆ ಅವರು, ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಬೆಂಗಾವಲಿನಲ್ಲಿ ತೆರಳುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ಎನ್ಐಎ ತಿಳಿಸಿದೆ.

ಇದನ್ನು ಓದಿ:ಸಂವಿಧಾನ ದಿನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗೆ ರಾಹುಲ್ ಗಾಂಧಿ ಅಗೌರವ: ಬಿಜೆಪಿ ಆರೋಪ

ABOUT THE AUTHOR

...view details