ಕರ್ನಾಟಕ

karnataka

ETV Bharat / bharat

ಮಣಿಪುರ ಗಡಿಯಲ್ಲಿ ಅಸ್ಸಾಂ ಪೊಲೀಸರು ಹೈ ಅಲರ್ಟ್‌ - ASSAM POLICE HIGH ALERT

ಅಸ್ಸೋಂ ಗಡಿ ಜಿಲ್ಲೆ ಕ್ಯಾಚಾರ್‌ನಲ್ಲಿ ಪೊಲೀಸರು ಹಾಗೂ ಕಮಾಂಡೋಗಳು 24 ಗಂಟೆ ಗಸ್ತು ತಿರುಗುತ್ತಿದ್ದಾರೆ.

Assam Police
ಅಸ್ಸೋಂ ಪೊಲೀಸರು (ETV Bharat)

By ETV Bharat Karnataka Team

Published : Nov 19, 2024, 6:20 PM IST

ಸಿಲ್ಚಾರ್ (ಅಸ್ಸಾಂ ) :ಮಣಿಪುರದಲ್ಲಿ ಹಿಂಸಾಚಾರ ತಡೆಯಲು ಅಸ್ಸಾಂ ಸರ್ಕಾರವು ಅಸ್ಸಾಂ - ಮಣಿಪುರ ಗಡಿಯಲ್ಲಿ ಭದ್ರತಾ ಪಡೆ (ಪೊಲೀಸರು ಮತ್ತು ಕಮಾಂಡೋ)ಗಳನ್ನ ನಿಯೋಜಿಸಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಪೊಲೀಸ್ ಮಹಾನಿರ್ದೇಶಕ ಜಿ. ಪಿ ಸಿಂಗ್ ಅವರ ನಿರ್ದೇಶನದ ನಂತರ, ಅಸ್ಸಾಂ ಪೊಲೀಸರು ಗಡಿಯಲ್ಲಿ ಗಸ್ತು ಮತ್ತು ಕಣ್ಗಾವಲು ತೀವ್ರಗೊಳಿಸಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ.

ಮಣಿಪುರದ ಜಿರಿಬಾಮ್ ಜಿಲ್ಲೆಯ ಜಕುರಧೋರ್​ನಲ್ಲಿ ಸಿಆರ್‌ಪಿಎಫ್‌ ಯೋಧರು ಶಂಕಿತ ಕುಕಿ ಉಗ್ರಗಾಮಿಗಳು ಎಂದು 10 ಜನರನ್ನು ಕೊಂದಿದ್ದರು. ನಾಪತ್ತೆಯಾಗಿದ್ದ ಮೈತೇಯಿ ಸಮುದಾಯದ 6 ಮಹಿಳೆಯರು ಹಾಗೂ ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು. ಈ ನಿಟ್ಟಿನಲ್ಲಿ ಕಾಚಾರ್ ಪೊಲೀಸರು ಗಡಿಯಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದ್ದಾರೆ.

ಕಮಾಂಡೋಗಳು (ETV Bharat)

ಮಣಿಪುರದಲ್ಲಿ ಯಾವುದೇ ಹಿಂಸಾಚಾರ ಹರಡುವುದನ್ನು ತಡೆಯಲು ಕ್ಯಾಚಾರ್ ಪೊಲೀಸರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಗಡಿಯಲ್ಲಿ ಪೊಲೀಸ್ ಮತ್ತು ಕಮಾಂಡೋ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದ್ದು, ಭೂಮಿ ಮತ್ತು ನದಿ ಮಾರ್ಗಗಳಲ್ಲಿ 24 ಗಂಟೆ ಗಸ್ತು ತಿರುಗುತ್ತಿದ್ದಾರೆ.

ಕಮಾಂಡೋಗಳು (ETV Bharat)

ಸಿಎಂ ಮತ್ತು ಡಿಜಿಪಿಯಿಂದ ಕಟ್ಟುನಿಟ್ಟಿನ ನಿರ್ದೇಶನ: ಅಸ್ಸಾಂ ಪೊಲೀಸರಿಗೆ ಮುಖ್ಯಮಂತ್ರಿ ಮತ್ತು ಡಿಜಿಪಿ ಅವರು ಜಾಗರೂಕರಾಗಿರಲು ಮತ್ತು ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

'ಗಲಭೆ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಕ್ಯಾಚಾರ್ ಎಸ್​ಪಿ ನೋಮಲ್ ಮಹತ್ತಾ ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಗಸ್ತು : ಕ್ಯಾಚಾರ್ ಎಸ್​ಪಿ ನೋಮಲ್ ಮಹತ್ತಾ ಅವರು ಪರಿಸ್ಥಿತಿಯನ್ನು ಹತೋಟಿಗೆ ತರಲು ಗಡಿ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿದ್ದಾರೆ. ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಕ್ಯಾಚಾರ್ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಮಣಿಪುರ ಹಿಂಸಾಚಾರ: ಈಶಾನ್ಯ ರಾಜ್ಯಕ್ಕೆ ಮತ್ತೆ 50 ಸಿಎಪಿಎಫ್ ತುಕಡಿಗಳನ್ನ ರವಾನಿಸಿದ ಕೇಂದ್ರ

ABOUT THE AUTHOR

...view details