ಭಾವನಗರ (ಗುಜರಾತ್):ನಗರದಿಂದ 17 ಕಿಲೋಮೀಟರ್ ದೂರದಲ್ಲಿರುವ ಘೋಘಾದಲ್ಲಿ ಭೂಕಂಪ ಸಂಭವಿಸಿದ್ದು, ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇನ್ನು ಗ್ರಾಮದಲ್ಲಿ ಭೂಮಿ ಕಂಪಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.
ಘೋಘಾ ಪಂಥಕ್‌ನಲ್ಲಿ ಭೂಕಂಪ: ಭಾವನಗರ ಜಿಲ್ಲೆಯಲ್ಲಿ ರಾತ್ರಿ ಹಠಾತ್ ಭೂಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ವಿಶೇಷವಾಗಿ ಘೋಘಾ ಪಂಥಕ್‌ನ ಹಳ್ಳಿಗಳಲ್ಲಿ ಜನರು ಭೂಕಂಪನವನ್ನು ಅನುಭವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೂಕಂಪದ ನಂತರ ಭಾವನಗರ ಆಡಳಿತವು ತಕ್ಷಣದ ಮಾಹಿತಿ ಒದಗಿಸಿದೆ.
ಚರ್ಚೆಗೆ ಗ್ರಾಸವಾದ ಭೂಕಂಪ: ಭಾವನಗರ ಜಿಲ್ಲೆಯ ಘೋಘಾ ತಾಲೂಕಿನಲ್ಲಿ ಭೂಕಂಪದ ಬಗ್ಗೆ ಚರ್ಚೆ ನಡೆದಿದೆ. ಗೃಹೋಪಯೋಗಿ ವಸ್ತುಗಳು, ಅಂಗಡಿ ಸಾಮಗ್ರಿಗಳು ಹಾಗೂ ಅವರು ಕುಳಿತಿದ್ದ ಕುರ್ಚಿ, ಮಂಚಗಳು ಕೂಡ ಅಲುಗಾಡಲಾರಂಭಿಸಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲ ಭೂಕಂಪನದಿಂದಾಗಿ ಗ್ರಾಮೀಣ ಭಾಗದಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪನದ ಬಗ್ಗೆ ಮಾತುಗಳು ಜೋರಾಗಿ ಕೇಳಿ ಬಂದಿವೆ.
ಭೂಮಿ ಎಲ್ಲಿ ಕಂಪಿಸಿತು ಎಂಬ ಚರ್ಚೆ: ಭಾವನಗರ ಜಿಲ್ಲೆಯ ಘೋಘಾ ಪಂಥಕ್‌ನಲ್ಲಿ ಭೂಕಂಪದ ಬಗ್ಗೆ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, ಘೋಘಾ ತಾಲೂಕಿನ ಇತರ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಕುಕ್ಡ್, ಗೋರಿಯಾಲಿ, ಕಂಟಲಾ, ಭಖಾಲ್, ಲಡ್ಕಾಯ ನವಗಮ್ನಲ್ಲಿ ಭೂಮಿ ಕಂಪಿಸಿದ ಎಂದು ಹೇಳಲಾಗ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪನದ ಮಾತುಗಳು ಹರಿದಾಡುತ್ತಿದ್ದಂತೆ ಜನರಲ್ಲಿ ಮತ್ತೆ ಭೂಕಂಪನದ ಬಗ್ಗೆ ಚರ್ಚೆ ಶುರುವಾಯಿತು. ಆದ್ರೂ ಕಚ್ ಭೂಕಂಪದ ಮೊದಲು ಭಾವನಗರದಲ್ಲಿ ನಿರಂತರವಾದ ಭೂಕಂಪಗಳು ಸಂಭವಿಸುತ್ತಲೇ ಇವೆ.
3.2 ತೀವ್ರತೆಯ ಭೂಕಂಪ: ಭಾವನಗರ ಜಿಲ್ಲೆಯಲ್ಲಿ ರಾತ್ರಿ 9.52ಕ್ಕೆ 3.2 ತೀವ್ರತೆಯ ಭೂಕಂಪದ ಅನುಭವವಾಗಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಕೇಂದ್ರ ಪ್ರಕಟಿಸಿದೆ. ಅಷ್ಟೇ ಅಲ್ಲ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸಹ ಭೂಕಂಪ ಸಂಭವಿಸಿರುವುದರ ಬಗ್ಗೆ ದೃಢಪಡಿಸಿದೆ. ಭೂಕಂಪದ ಕೇಂದ್ರಬಿಂದು ಭಾವನಗರದಿಂದ ನೈಋತ್ಯಕ್ಕೆ 11.7 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಘೋಷಿಸಲಾಗಿದೆ. ಭಾವನಗರ ಜಿಲ್ಲಾಧಿಕಾರಿ ತಕ್ಷಣ ತನಿಖೆ ನಡೆಸಿ ಭೂಕಂಪದ ನಂತರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಘೋಷಿಸಿದರು.
ಓದಿ:ಇಂದು ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ - 2nd PUC Result