ನವದೆಹಲಿ:ಅಮುಲ್ ಬ್ರಾಂಡ್ ಹೆಸರಿನಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (GCMMF) ಅಮೂಲ್ ಹಾಲಿನ ದರವನ್ನು ಲೀಟರ್ಗೆ 2 ರೂಪಾಯಿ ಹೆಚ್ಚಿಸಿದೆ.
ಇಂದಿನಿಂದ ಈ ಅಮೂಲ್ ಹಾಲಿನ ದರ ದೇಶದಾದ್ಯಂತ ಜಾರಿಯಾಗಿದೆ. ಹಾಲು ಉತ್ಪಾದನ ವೆಚ್ಚ ಮತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಲಿನ ಮಾರಾಟ ದರವನ್ನು ಹೆಚ್ಚಿಸಲಾಗಿದೆ ಎಂದು ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜತೆಗೆ ನಮ್ಮ ಸದಸ್ಯ ಒಕ್ಕೂಟಗಳು ಕಳೆದ ವರ್ಷಕ್ಕಿಂತ ಸರಿಸುಮಾರು 6-8 ಪ್ರತಿಶತದಷ್ಟು ರೈತರಿಗೆ ನೀಡುವ ಬೆಲೆಯಲ್ಲಿ ಹೆಚ್ಚಿಸಿದೆ. ಅಮುಲ್ ಕಂಪನಿಯ ನಿಯಮದಂತೆ ಹಾಲು ಮತ್ತು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.