ಮುಂಬೈ:ತಾಂತ್ರಿಕ ದೋಷದಿಂದ ರಷ್ಯಾದ ಕ್ರಾಸ್ನಾಯಾರ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ದೆಹಲಿ - ಸ್ಯಾನ್ಪ್ರಾನ್ಸಿಸ್ಕೊ ವಿಮಾನ ಪ್ರಯಾಣಿಕರಿಗಾಗಿ ಏರ್ ಇಂಡಿಯಾ ಸಂಸ್ಥೆ ರಿಲೀಫ್ (ಪರ್ಯಾಯ) ವಿಮಾನ ಕಾರ್ಯಾಚರಣೆ ನಡೆಸಿದೆ.
ಈ ರಿಲೀಫ್ ವಿಮಾವೂ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.52ಕ್ಕೆ ಟೇಕ್ ಆಫ್ ಆಗಿದ್ದು, ರಷ್ಯಾದ ಕ್ರಾಸ್ನಾಯಾರ್ಕ್ನ ವಿಮಾ ನಿಲ್ದಾಣಕ್ಕೆ ಸಂಜೆ 7ಗಂಟೆಗೆ ತಲುಪಲಿದೆ ಎಂದು ಏರ್ಲೈನ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುವಾರ 225 ಪ್ರಯಾಣಿಕರು, 19 ಸಿಬ್ಬಂದಿ ಸದಸ್ಯರನ್ನು ಹೊಂದಿದ್ದ ಎಐ 183 ದೆಹಲಿ - ಸ್ಯಾನ್ ಪ್ರಾನ್ಸಿಸ್ಕೋ ವಿಮಾನ ಬೋಯಿಂಗ್ 777 ಏರ್ಕ್ರಾಫ್ಟ್ನ ಕಾರ್ಗೋ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಕಾಕ್ಪಿಟ್ ಸಿಬ್ಬಂದಿ ಪತ್ತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವೂ ರಷ್ಯಾದಲ್ಲಿ ಭೂ ಸ್ಪರ್ಶ ಮಾಡಿತ್ತು.