ನವದೆಹಲಿ:ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಮತ್ತು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪ ಈಗ ಅನಾಮಧೇಯವಾಗಿದೆ.ಸೌರಶಕ್ತಿ ಯೋಜನೆಯಲ್ಲಿ ಅದಾನಿ ಗ್ರೂಪ್ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ಅಮೆರಿಕ ತನ್ನದೇ ಕೋರ್ಟ್ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಲೋಪವಿದೆ ಎಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಬುಧವಾರ ಹೇಳಿದ್ದಾರೆ.
ಅಮೆರಿಕದ ದೋಷಾರೋಪ ಪಟ್ಟಿ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಅಮೆರಿಕದ ಪ್ರಾಸಿಕ್ಯೂಟರ್ಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಅಣ್ಣನ ಮಗ ಸಾಗರ್ ಅದಾನಿ ಅವರ ಹೆಸರಿಲ್ಲ. ಅವರು ಹೇಗೆ, ಯಾರಿಗೆ ಲಂಚ ನೀಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದಿದ್ದಾರೆ.
ಲಂಚ ನೀಡಿದ, ಪಡೆದವರ ಹೆಸರಿಲ್ಲ:ಅದಾನಿಗಳ ವಿರುದ್ಧ ಅಮೆರಿಕವು ಎಫ್ಸಿಪಿಎ ಉಲ್ಲಂಘನೆ ಆರೋಪ ಮಾಡಿಲ್ಲ. ಭಾರತೀಯ ಯಾವ ಅಧಿಕಾರಿ, ಇಲಾಖೆಗೆ ಸೌರ ವಿದ್ಯುತ್ ಒಪ್ಪಂದಕ್ಕಾಗಿ ಲಂಚ ನೀಡಿದ್ದಾರೆ ಎಂಬುದನ್ನೂ ಉಲ್ಲೇಖಿಸಿಲ್ಲ. ಲಂಚ ನೀಡಿರುವ ಮತ್ತು ಪಡೆದಿರುವ ಅಧಿಕಾರಿಗಳ ಒಂದೇ ಒಂದು ಹೆಸರು ದೋಷಾರೋಪ ಪಟ್ಟಿಯಲ್ಲಿ ಇಲ್ಲ ಎಂದು ರೋಹಟಗಿ ಸ್ಪಷ್ಟಪಡಿಸಿದ್ದಾರೆ.