ಕರ್ನಾಟಕ

karnataka

ETV Bharat / bharat

ರ್‍ಯಾಗಿಂಗ್​​​​ : 'ಬಾಗಿಲು ಮುಚ್ಚಿ ರಾತ್ರಿ ಬಟ್ಟೆಯಿಲ್ಲದೇ ನೃತ್ಯ: ನಾನು ಇಲ್ಲಿ ಇರಲಾರೆ ಅಪ್ಪ'

ಅವರು ನನಗೆ ಇಲ್ಲಿ ತೊಂದರೆ ಕೊಡುತ್ತಿದ್ದಾರೆ. ಮನೆಗೆ ಬರುತ್ತೇನೆ ಎಂದು ವಿದ್ಯಾರ್ಥಿಯೊಬ್ಬ ತಂದೆ ಬಳಿ ಆತಂಕ ವ್ಯಕ್ತಪಡಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

15-students-harassment-on-one-student-in-gurukula-in-kamareddy
'ಬಾಗಿಲು ಮುಚ್ಚಿ ರಾತ್ರಿ ಬಟ್ಟೆಯಿಲ್ಲದೇ ನೃತ್ಯ: ನಾನು ಇಲ್ಲಿ ಇರಲಾರೆ ಅಪ್ಪ' (ETV Bharat)

By ETV Bharat Karnataka Team

Published : 12 hours ago

ಕಾಮರೆಡ್ಡಿ, ತೆಲಂಗಾಣ: ಜಿಲ್ಲೆಯ ಗುರುಕುಲದಲ್ಲಿ ವಿದ್ಯಾರ್ಥಿಯೊಬ್ಬ ಮೇಲೆ ವಿದ್ಯಾರ್ಥಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಸಹವಿದ್ಯಾರ್ಥಿಗಳ ಅನುಚಿತ ವರ್ತನೆಯಿಂದ ವಿದ್ಯಾರ್ಥಿಗೆ ತೀವ್ರ ಮಾನಸಿಕ ತೊಂದರೆಯಾಗಿದೆ.

ಏನಿದು ಘಟನೆ?: ಕಾಮರೆಡ್ಡಿ ಜಿಲ್ಲೆ ಗುರುಕುಲ ವಿದ್ಯಾಲಯವೊಂದರ ಆರನೇ ತರಗತಿ ವಿದ್ಯಾರ್ಥಿ ಮೇಲೆ ಅದೇ ತರಗತಿಯ 15 ವಿದ್ಯಾರ್ಥಿಗಳು ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿ ತನ್ನ ತಂದೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ವಿದ್ಯಾರ್ಥಿಗಳು ರಾತ್ರಿ ವೇಳೆ ಕೊಠಡಿಯ ಬಾಗಿಲು ಮುಚ್ಚಿ ಬಟ್ಟೆ ಇಲ್ಲದೇ ಡ್ಯಾನ್ಸ್​ ಮಾಡುತ್ತಾರೆ. ನನ್ನನ್ನು ಡ್ಯಾನ್ಸ್​ ಮಾಡುವಂತೆ ಒತ್ತಾಯಿಸುತ್ತಾರೆ, ಥಳಿಸುತ್ತಾರೆ, ಚಾದರ್​ ಅನ್ನು ಕಸಿದುಕೊಂಡು ನಿದ್ರೆಯಿಲ್ಲದಂತೆ ಮಾಡುತ್ತಾರೆ. ಈ ವಿಷಯಗಳನ್ನು ಯಾರಿಗಾದರೂ ಹೇಳಿದರೆ ರಾತ್ರಿ ನಿನ್ನ ಸಂಗತಿ ನೋಡಿಕೊಳ್ಳುತ್ತೇವೆ ಎಂದು ಸಹಪಾಠಿಗಳು ಬೆದರಿಕೆ ಹಾಕಿದ್ದಾರೆ. ದಸರಾ ಹಬ್ಬದ ರಜೆ ಮುಗಿಸಿಕೊಂಡು ಬಂದ ಮೇಲೆ ಮತ್ತಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಬಾಲಕ ತನ್ನ ತಂದೆ ಬಳಿ ಅಲವತ್ತುಕೊಂಡಿದ್ದಾನೆ.

ರಾಯಲಸೀಮಾ ವಿಶ್ವವಿದ್ಯಾನಿಲಯದಲ್ಲಿ ರ್‍ಯಾಗಿಂಗ್​​​​​​​​​​​ ಸದ್ದು - ಮಧ್ಯರಾತ್ರಿ ಕಿರಿಯ ವಿದ್ಯಾರ್ಥಿಗೆ ಮೈದಾನದಲ್ಲಿ ಓಡಿಸಿ ಥಳಿತ

ಕಳೆದ ಭಾನುವಾರ ಬಾಲಕ ತಂದೆ ಸಂಬಂಧಿಕರ ಸಹಾಯದಿಂದ ಮಗನನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಬಾಲಕನ ತಂದೆ ಸೆಲ್ ಫೋನ್ ಮೂಲಕ ಪ್ರಾಂಶುಪಾಲರನ್ನು ಸಂಪರ್ಕಿಸಿ ಸಹ ವಿದ್ಯಾರ್ಥಿಗಳು ಈ ರೀತಿ ವರ್ತಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಸಹ ವಿದ್ಯಾರ್ಥಿಗಳಿಗೆ ಛೀಮಾರಿ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪ್ರಾಂಶುಪಾಲರನ್ನು ಈಟಿವಿ ವಿವರಣೆ ಕೇಳಿದಾಗ, ವಿದ್ಯಾರ್ಥಿಯ ತಂದೆ ಕರೆ ಮಾಡಿ ವಿಷಯ ತಿಳಿಸಿದ್ದು, ವಿವರ ತಿಳಿಯಲು ಬಾಲಕನಿಗೆ ಕರೆ ಮಾಡಿ ಸಹ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಮತ್ತೊಂದು ಕಡೆ ಕರ್ನೂಲ್ ಜಿಲ್ಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ಹಲ್ಲೆ ನಡೆಸಿರುವುದು ಗೊತ್ತೇ ಇದೆ. ರಾಯಲಸೀಮಾ ವಿಶ್ವವಿದ್ಯಾನಿಲಯದಲ್ಲಿ ಸುನೀಲ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ 15 ಮಂದಿ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ಗುರುವಾರ ಮಧ್ಯರಾತ್ರಿ ಪರಿಚಯ ವೇದಿಕೆಯ ಹೆಸರಿನಲ್ಲಿ ಹಲವಾರು ಸೀನಿಯರ್​​ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಕ್ರೀಡಾಂಗಣದಲ್ಲಿ ಕಿರಿಯ ವಿದ್ಯಾರ್ಥಿಯನ್ನು ಓಡಿಸುವುದರ ಜೊತೆಗೆ ಮನಬಂದಂತೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಸುನೀಲ್ ಅನ್ನು ಚಿಕಿತ್ಸೆಗಾಗಿ ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ:ಮೃತ ಪುತ್ರನ ಶವದೊಂದಿಗೆ ಮೂರು ದಿನ ಕಳೆದ ಅಂಧ ವೃದ್ಧ ಪೋಷಕರು!

ABOUT THE AUTHOR

...view details