ವಿಡಿಯೋ: ವಡೋದರಾದ ಬುಲ್ಡೋಜರ್ ಪ್ಲಾಂಟ್‌ನಲ್ಲಿ ಜೆಸಿಬಿ ಏರಿ ಕುಳಿತ ಬ್ರಿಟಿಷ್ ಪ್ರಧಾನಿ - ಬುಲ್ಡೋಜರ್ ಪ್ಲಾಂಟ್ಗೆ ಭೇಟಿ ನೀಡಿದ ಬೋರಿಸ್
ವಡೋದರಾ(ಗುಜರಾತ್): ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುಜರಾತ್ನ ವಡೋದರಾದಲ್ಲಿರುವ ಬ್ರಿಟನ್ ಮೂಲದ ಜೆಸಿಬಿ ಪ್ಲಾಂಟ್ಗೆ ಭೇಟಿ ನೀಡಿದರು. ಈ ವೇಳೆ ಜೆಸಿಬಿ ಯಂತ್ರದ ಡ್ರೈವರ್ ಸೀಟ್ನಲ್ಲಿ ಕುಳಿತುಕೊಂಡರು. ಗುಜರಾತ್ ಸಿಎಂ ಭುಪೇಂದ್ರ ಪಟೇಲ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಇದ್ದರು.