ಪ್ರಚಾರಕ್ಕೂ ಸೈ ಡ್ಯಾನ್ಸ್ಗೂ ಸೈ... ಸಂಸದೆ ಶೋಭಾ ಕರಂದ್ಲಾಜೆ ಹೆಜ್ಜೆ ಹಾಕಿದ್ದು ಹೀಗೆ!
ಕಲಬುರಗಿ:ಚಿಂದಾನೂರ ತಾಂಡಾದಲ್ಲಿ ಪ್ರಚಾರದ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಲಂಬಾಣಿ ಸಮಾಜದ ನೃತ್ಯಕ್ಕೆ ಸಖತ್ ಸ್ಟೇಪ್ ಹಾಕಿದರು. ಲಂಬಾಣಿ ಸಮುದಾಯದ ವೇಷಭೂಷಣ ಧರಿಸಿದ ಶೋಭಾ ಕರಂದ್ಲಾಜೆ ಪ್ರಚಾರದ ವೇಳೆ ಲಂಬಾಣಿ ಶೈಲಿಯಲ್ಲಿ ಸಮುದಾಯದ ಮಹಿಳೆಯರ ಜೊತೆ ಹೆಜ್ಜೆ ಹಾಕಿದರು. ಈ ಮೂಲಕ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರ ಮತಯಾಚನೆ ಮಾಡಿದರು.