ಮೋದಿ ಹುಟ್ಟುಹಬ್ಬ: ರಕ್ತದಾನ ಮಾಡಿದ ಆರೋಗ್ಯ ಸಚಿವ, ಕಸಗೂಡಿಸಿದ ರೈಲ್ವೆ ಮಂತ್ರಿ - Blood Donation Camp
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದರಲ್ಲಿ ರಕ್ತದಾನ ಶಿಬಿರ, ಸ್ವಚ್ಛ ಭಾರತ್ ಅಭಿಯಾನ ಸಹ ಸೇರಿಕೊಂಡಿವೆ. ಪ್ರಮುಖ ಕಾರ್ಯಕ್ರಮಗಳ ಅಂಗವಾಗಿ ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್ ಮಾಂಡವೀಯಾ ರಕ್ತ ಶಿಬಿರ ಅಭಿಯಾನದಲ್ಲಿ ಭಾಗಿಯಾಗಿದ್ದು, ರಕ್ತದಾನ ಮಾಡಿದರು. ಇನ್ನುಳಿದಂತೆ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.