ಬಳ್ಳಾರಿ ಗಡಿ ಭಾಗದಲ್ಲಿ ಭಾರಿ ಮಳೆ: ಡೊನೆಕಲ್ ಗ್ರಾಮದ ಸೇತುವೆ ಮಧ್ಯೆ ಸಿಲುಕಿಕೊಂಡ ಲಾರಿ - ಈಟಿವಿ ಭಾರತ ಕನ್ನಡ
ಬಳ್ಳಾರಿ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಗಡಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅನಂತಪುರ ಜಿಲ್ಲೆಯ ಡೊನೆಕಲ್ ಗ್ರಾಮದ ಬಳಿಯ ಕೆಳ ಮಟ್ಟದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಮಾರ್ಗದಲ್ಲಿ ಸಂಚಾರ ಸಾಧ್ಯವಿಲ್ಲದ ಕಾರಣ ಬಳ್ಳಾರಿ ತಾಲೂಕಿನಿಂದ ಗಡಿ ಭಾಗದ ಹಳ್ಳಿಗಳು ಮತ್ತು ಆಂಧ್ರದ ಗುಂತಕಲ್, ಗುತ್ತಿ ತಿರುಪತಿ, ಗುಂಟೂರು, ವಿಜಯವಾಡ, ನಗರಗಳಿಗೆ ಹೋಗುವ ವಾಹನಗಳು ಉರವಗೊಂಡ ಹಾಗೂ ಆಲೂರು ಮಾರ್ಗವಾಗಿ 35 ರಿಂದ 40ಕಿ.ಮೀ ಸುತ್ತಿ ಬಳಸಿ ತೆರಳುತ್ತಿವೆ. ಡೊನೆಕಲ್ ಗ್ರಾಮದ ಸೇತುವೆ ಮಳೆ ನೀರಿನಲ್ಲಿ ಮುಳುಗಿದ್ದರಿಂದ ರಸ್ತೆ ಕಾಣದಾಗಿದೆ. ಲಾರಿಯೊಂದು ಸೇತುವೆ ಮಧ್ಯೆ ಸಿಲುಕಿಕೊಂಡಿದೆ. ಮುಂದೆ ಹೋಗಲು ಸಾಧ್ಯವಾಗದ ಚಾಲಕ ಜೀವ ಭಯದಿಂದ ಲಾರಿಯನ್ನ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾನೆ ಎನ್ನಲಾಗ್ತಿದೆ.
Last Updated : Aug 2, 2022, 12:40 PM IST