ಬೆಂಗಳೂರು ಟ್ರಾಫಿಕ್ಗೆ ಡೋಂಟ್ ಕೇರ್.. ರಸ್ತೆ ಮಧ್ಯೆ ಕುಳಿತು ಉಪಹಾರ ಸೇವಿಸಿದ ಕುಡುಕ - ವಿಡಿಯೋ - drunken man eat tiffin
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಸಾಮಾನ್ಯ. ಇಂತಹದರಲ್ಲಿ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಂಠಪೂರ್ತಿ ಕುಡಿದ ಕುಡುಕನೊಬ್ಬ ಅವಾಂತರ ಸೃಷ್ಟಿಸಿದ್ದಾನೆ. ಮಧ್ಯ ರಸ್ತೆಯಲ್ಲಿ ಆರಾಮಾಗಿ ಕುಳಿತು ತಟ್ಟೆಯಲ್ಲಿ ದೋಸೆ, ನೀರಿನ ಬಾಟಲ್ ಇಟ್ಟುಕೊಂಡು ಉಪಹಾರ ಸೇವಿಸಿದ್ದಾನೆ. ಕೆಲಕಾಲ ವಾಹನ ಸವಾರರನ್ನು ದಂಗಾಗಿಸಿದ್ದಾನೆ. ಅಲ್ಲದೇ, ವಾಹನ ಸವಾರರಿಗೆ ಸೈಡಿನಲ್ಲಿ ಹೋಗಿ ಎಂದು ಆವಾಜ್ ಸಹ ಹಾಕಿದ್ದಾನೆ ಈ ಆಸಾಮಿ.