ತಾಯಿಯ ಮೃತದೇಹ ಹೊತ್ತು ಸಾಗಿದ ಹೆಣ್ಣು ಮಕ್ಕಳು... ಸಂಪ್ರದಾಯ ಬದಿಗೊತ್ತಿದ ಸಹೋದರಿಯರು! - ಇಬ್ಬರು ಸಹೋದರಿಯರು
ದಮ್ಕಾ(ಜಾರ್ಖಂಡ್): ಮನೆಯಲ್ಲಿ ಯಾರಾದ್ರೂ ತೀರಿಕೊಂಡರೆ ಸಂಪ್ರದಾಯದಂತೆ ಮೃತಹದೇಹವನ್ನು ಗಂಡು ಮಕ್ಕಳು ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನದವರೆಗೆ ಹೋಗಿ ವಿಧಿ - ವಿಧಾನ ನಡೆಸುವುದು ರೂಢಿ. ಆದರೆ, ಇದಕ್ಕೆ ತಿಲಾಂಜಲಿ ಹಾಡಿರುವ ಜಾರ್ಖಂಡ್ನ ಸಹೋದರಿಯರು ಮೃತ ತಾಯಿಯ ಶವ ಹೊತ್ತು ಸ್ಮಶಾನದವರೆಗೂ ಹೋಗಿದ್ದಾರೆ. ಉಮಾದೇವಿ ಎಂಬ ಮಹಿಳೆ ಸಾವನ್ನಪ್ಪಿದ್ದು, ಈಕೆಗೆ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಸೇರಿ ಐವರು ಮಕ್ಕಳಿದ್ದರು. ಗಂಡು ಮಕ್ಕಳು ಸರಿಯಾಗಿ ನೋಡಿಕೊಳ್ಳದ ಕಾರಣ ಹೆಣ್ಣುಮಕ್ಕಳ ಮನೆಯಲ್ಲಿದ್ದ ಉಮಾ ಇದೀಗ ಸಾವನ್ನಪ್ಪಿದ್ದು, ತಾಯಿಯ ಅಂತಿಮ ವಿಧಿವಿಧಾನ ಸಹ ಅವರೇ ನಡೆಸಿಕೊಟ್ಟಿದ್ದಾರೆ. ಈ ಹಿಂದೆ ಇಂತಹ ಘಟನೆ ಮಹಾರಾಷ್ಟ್ರದಲ್ಲೂ ನಡೆದಿತ್ತು ಎಂಬುದು ವಿಶೇಷ.
Last Updated : Oct 16, 2019, 9:23 PM IST