ರಾಜಕೋಟ್ನಲ್ಲಿ ವರುಣನ ಆರ್ಭಟ: ನೀರಿನ ರಭಸಕ್ಕೆ ಕೊಚ್ಚಿ ಹೋದ ದನ, ಕರುಗಳು..! - rajkote rain
ರಾಜಕೋಟ್ (ಗುಜರಾತ್): ಗುಜರಾತ್ನಲ್ಲಿ ವರುಣನ ಆರ್ಭಟ ಜೋರಾಗಿದೆ. ಹಲವೆಡೆ ಭಾರೀ ವರ್ಷಧಾರೆ ಸುರಿದಿದ್ದು ಹಲವು ಅವಾಂತರಗಳು ಸೃಷ್ಟಿಯಾಗಿವೆ. ರಾಜಕೋಟ್ ಜಿಲ್ಲೆಯ ಖಿಜಾಡಿಯಾ ಮೋಟಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ದನಗಳು ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಸೆರೆಯಾಗಿದೆ. ಇದರ ಜೊತೆಗೆ ಜನ ಜೀವನ ಕೂಡ ಅಸ್ತವ್ಯಸ್ತವಾಗಿದೆ.