ಅಮರನಾಥ ಯಾತ್ರೆ: ಜಮ್ಮು ಬೇಸ್ ಕ್ಯಾಂಪ್ ತಲುಪಿದ ಭಕ್ತರ ತಂಡಕ್ಕೆ ಹಸಿರು ನಿಶಾನೆ ತೋರಿದ ಮನೋಜ್ ಸಿನ್ಹಾ - ಅಮರನಾಥ ಯಾತ್ರೆ
ಜಮ್ಮು: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ವಾರ್ಷಿಕ ಅಮರನಾಥ ಯಾತ್ರೆ ನಾಳೆಯಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 11ರಂದು ಮುಕ್ತಾಯಗೊಳ್ಳಲಿದೆ. ಹಿಮಾಚ್ಛಾದಿತ ಗುಹೆಯಲ್ಲಿರುವ ಪವಿತ್ರ ಶಿವಲಿಂಗದ ದರ್ಶನಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಮೊದಲ ತಂಡ ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ ಗುಹಾ ದೇವಾಲಯದತ್ತ ಯಾತ್ರೆ ಶುರು ಮಾಡಿದ್ದು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹಸಿರು ನಿಶಾನೆ ತೋರಿದರು.