ಸೋಮವಾರಪೇಟೆಯಲ್ಲಿ ಬೈಕ್ - ಸ್ಕೂಟಿ ಭೀಕರ ಅಪಘಾತ.. ವಿಡಿಯೋ - bike accident in somavarapete
ಕೊಡಗು: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಸಂಭವಿಸಿ ಮೂವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ಸಮೀಪದ ನಗರೂರು ಬಳಿ ಸಂಭವಿಸಿದೆ. ಐಗೂರು ನಿವಾಸಿ ಯೋಧ ಡಾಲು ಎಂಬುವರಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ. ಮತ್ತಿಬ್ಬರು ಆಸಿಫ್ ಹಾಗೂ ಮನೋಜ್ ಎಂಬುವರನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.