ಕರ್ನಾಟಕ

karnataka

ETV Bharat / videos

ಭೀಮಾ ಹಿನ್ನೀರಲ್ಲಿ ಸಿಲುಕಿಕೊಂಡ ಬಸ್​​: ಸ್ಥಳೀಯರಿಂದ ಪ್ರಯಾಣಿಕರ ರಕ್ಷಣೆ - kalaburgi Bhima river flood

By

Published : Oct 18, 2020, 1:44 PM IST

ಕಲಬುರಗಿ: ಸಾರಿಗೆ ಬಸ್​​​ವೊಂದು ಪ್ರವಾಹಕ್ಕೆ ಸಿಲುಕಿ ಪ್ರಯಾಣಿಕರು ಪರದಾಡಿದ ಘಟನೆ, ಅಫಜಲಪುರ ತಾಲೂಕಿನ ಶಿರವಾಳ ಗ್ರಾಮದ ಬಳಿ ನಡೆದಿದೆ. ಅಫಜಲಪುರದಿಂದ ಕರ್ಜಗಿ ಗ್ರಾಮದ ಕಡೆ ಹೊರಟಿದ್ದ ಬಸ್, ಭೀಮಾ ನದಿ ಪ್ರವಾಹದ ಹಿನ್ನೀರಿನಲ್ಲಿ ಸಿಲುಕಿಕೊಂಡಿದೆ. ಸೈಲೆನ್ಸರ್​ನಲ್ಲಿ ನೀರು ಹೋಗಿದ್ದರಿಂದ ಮಧ್ಯದಲ್ಲಿ ಬಸ್ ಬಂದ್ ಆಗಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು, ಸ್ಥಳೀಯರ ಸಹಾಯದಿಂದ ಗಂಡಾಂತರದಿಂದ ಹೊರ ಬಂದಿದ್ದಾರೆ. ಬಸ್​ಗೆ ಹಗ್ಗ ಕಟ್ಟಿ ಟ್ರ್ಯಾಕ್ಟರ್ ಸಹಾಯದಿಂದ ದಡ ಸೇರಿಸಲಾಯಿತು. ಭೀಮಾ ನದಿಯಲ್ಲಿ 8.50 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರು ಹರಿಬಿಡಲಾಗಿದೆ.

ABOUT THE AUTHOR

...view details