ಕಲ್ಪವೃಕ್ಷ ನಾಡಿನಲ್ಲಿ ಅದ್ದೂರಿ ವಿಶ್ವಕರ್ಮ ಜಯಂತಿ ಆಚರಣೆ - tumkuru vishwa karma day
ತುಮಕೂರು: ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವ ಕರ್ಮ ಜ್ಞಾನ ಯಜ್ಞ ಮಹೋತ್ಸವ ಸಮಿತಿ ವತಿಯಿಂದ ನಗರದ ವಿವಿಧ ರಸ್ತೆಗಳಲ್ಲಿ ದೇವರ ಮೆರವಣಿಗೆ, ರಥೋತ್ಸವ ನಡೆಯಿತು. ವಿಶ್ವಕರ್ಮ ಸಮಾಜವು ರೈತರ ಬೆನ್ನೆಲುಬಾಗಿ ನಿಂತು ಚಿನ್ನ, ಕಬ್ಬಿಣ, ಮೂರ್ತಿ ಕೆತ್ತನೆ, ಮರಗೆಲಸ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಕುಲಕಸುಬುಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಸಮಾಜದ ಏಳಿಗೆಗಾಗಿ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್.ಪಿ ನಾಗರಾಜು ತಿಳಿಸಿದರು.