ಬದ್ಮಾಶ್‌ಗಳು ತಾವು ಸಾಚಾ ಎಂದು ತೋರಿಸಿಕೊಳ್ಳಲು ಟ್ರಿಕ್ಸ್ ಬಳಸ್ತಾರೆ.. ರಮೇಶ್‌ಕುಮಾರ್ ಮಾತಿನ ತಿವಿತ!
ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷದ ನಡುವೆ ಮಾತಿನ ಜಟಾಪಟಿ ಜೋರಾಗಿದೆ. ಯಾರಿಗೆ ನೈತಿಕತೆ ಇರುತ್ತದೆಯೋ ಅವರ ಮನಸ್ಸಿಗೆ ಗೊತ್ತಿರುತ್ತದೆ. ಅಂತವರು ಮಾತ್ರ ನೈತಿಕತೆಯ ಪ್ರಶ್ನೆ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದಕ್ಕೆ ಟಾಂಗ್ ಕೊಡುವಂತೆ ಮಾತನಾಡಿದ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್, ಮಾಜಿ ಸಿಎಂ ಜೆ ಹೆಚ್ ಪಟೇಲ್ ಹೇಳಿದಂತಹ ಮಾತುಗಳನ್ನು ನೆನಪಿಸಿ ಬದ್ಮಾಶ್‌ಗಳು ತಾವು ಸಾಚಾ ಎಂದು ತೋರಿಸಿಕೊಳ್ಳಲು ಟ್ರಿಕ್ಸ್ ಉಪಯೋಗಿಸುತ್ತಾರೆ ಎಂದು ಕಾಲೆಳೆದಿದ್ದಾರೆ.