ತಲೆ ಮೇಲೆ ಮೂಟೆ ಹೊತ್ತು ಅಪಾಯಕಾರಿ ಸೇತುವೆ ದಾಟಿ ಸಂತ್ರಸ್ತರಿಗೆ ತಹಶೀಲ್ದಾರ್ ನೆರವು! ವಿಡಿಯೋ..
ನೆರೆಪೀಡಿತ ಜನರ ನೆರವು ನೀಡುವ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಯೊಬ್ಬರು ಅಪಾಯಕಾರಿ ಸೇತುವೆಯಲ್ಲಿ ತಲೆ ಮೇಲೆ ಗೋಣಿ ಚೀಲದಲ್ಲಿ ಆಹಾರ ಸಾಗಿಸಿ ನೆರವು ನೀಡುವುದರಲ್ಲಿ ಕೈಜೋಡಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ತಾಲೂಕಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರು ನೆರೆ ಸಂತ್ರಸ್ತರಿಗೆ ಸ್ವತಃ ನೆರವು ನೀಡಲು ಮುಂದಾಗಿದ್ದು, ಬೆಳ್ತಂಗಡಿ ತಾಲೂಕಿನ ಬಂಜಾರು ಮಲೆಯಲ್ಲಿ ಮೊನ್ನೆ ಬಂದ ಪ್ರವಾಹದಲ್ಲಿ ಸೇತುವೆ ಕುಸಿದು ಬಿದ್ದಿತ್ತು. ಇದರಿಂದ ಬಂಜಾರು ಮಲೆ ಸಂಪರ್ಕ ಕಡಿದಿತ್ತು. ಇದೀಗ ಬಾಂಜಾರು ಮಲೆಗೆ ತಾತ್ಕಾಲಿಕ ಮರವನ್ನು ಅಡ್ಡ ಹಾಕಿ ಕಾಲು ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಯಲ್ಲಿ ಸ್ವತಃ ತಹಶೀಲ್ದಾರರು ಆಹಾರ ಸಾಮಾಗ್ರಿ ಗೋಣಿ ಚೀಲವನ್ನು ತಲೆಯಲ್ಲಿ ಹೊತ್ತು ಸೇತುವೆ ದಾಟಿ ಬಂಜಾರು ಮಲೆ ಸಂತ್ರಸ್ತರಿಗೆ ನೀಡಿದ್ದಾರೆ. ಇವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.