ಕರ್ನಾಟಕ

karnataka

ETV Bharat / videos

ಹಿಂದೂ ವಿರೋಧಿ ಕೃತ್ಯ ನಡೆಸುವವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ - ಕೊಣಾಜೆ ಧಾರ್ಮಿಕ ಕ್ಷೇತ್ರಗಳಲ್ಲಿ ಅಪವಿತ್ರ ಎಸಗಿದ ಆರೋಪಿಗಳು

By

Published : Jan 24, 2021, 5:51 PM IST

ಉಳ್ಳಾಲ : ಹಿಂದೂ ಜನಜಾಗ್ರತಿ ಸಮಿತಿ ಕೊಣಾಜೆ ವತಿಯಿಂದ ಹಿಂದೂ ವಿರೋಧಿ ಕೃತ್ಯ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕೊಣಾಜೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಕೇಂದ್ರೀಯ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಅವರು, ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಮತಾಂತರಿಗಳು ಬಹುಸಂಖ್ಯಾತರಾದ ಪ್ರದೇಶಗಳಲ್ಲಿ ಹಿಂದೂಗಳ ವಿರುದ್ಧ ನೀಚ ಕೃತ್ಯ ನಡೆಸುತ್ತಿದ್ದಾರೆ. ಕೊಣಾಜೆಯಲ್ಲಿ ಕೃತ್ಯ ಎಸಗಿರುವ ಆರೋಪಿಗಳನ್ನು ಬಂಧಿಸಿ ಅವರ ಇತಿಹಾಸ ತಿಳಿಯಬೇಕಿದೆ. ಒಂದು ವಾರದೊಳಗೆ ಪಾತಕಿಗಳನ್ನು ಪೊಲೀಸರು ಪತ್ತೆ ಹಚ್ಚದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತೇವೆ ಎಂದರು. ಈ ವೇಳೆ ಕೊಣಾಜೆಯ ಆರ್​ಎಸ್​ಎಸ್ ಮುಖಂಡ ವರದರಾಜ್ ಬೊಳ್ಳಕುಮೇರ್ ಉಪಸ್ಥಿತರಿದ್ದರು.

ABOUT THE AUTHOR

...view details