ಜನರ ಸಂಕಷ್ಟಕ್ಕೆ ನೊಂದ ಶ್ರೀ.. ಅಡ್ಡಪಲ್ಲಕ್ಕಿ ಮೆರವಣಿಗೆ ನಿರಾಕರಿಸಿ ಪಾದಯಾತ್ರೆ ಕೈಗೊಂಡ ಶ್ರೀಶೈಲ ಜಗದ್ಗುರು
ನಾಡಿನಲ್ಲಿ ನೆರೆ ಹಾವಳಿಯಿಂದ ಮನೆ-ಆಸ್ತಿ, ಅಮೂಲ್ಯ ಬೆಳೆ ಹಾಗೂ ಬೆಳೆಬಾಳುವ ವಸ್ತುಗಳು, ಜನ-ಜಾನುವಾರುಗಳ ಜೀವ ಹಾನಿಯಾಗಿದೆ. ಜನರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಶೈಲ ಜಗದ್ಗುರುಗಳು ಅಡ್ಡಪಲ್ಲಕ್ಕಿ ಮೆರವಣಿಗೆ ನಿರಾಕರಿಸಿದ್ದು, ಕೇವಲ ಪಾದಯಾತ್ರೆ ಮಾಡಿದ್ದಾರೆ. ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಶ್ರೀಗಳ ನೇತೃತ್ವದಲ್ಲಿ, ಚಬನೂರ ಗ್ರಾಮದ ಹಿರೇಮಠದ ಕಾಶೀಲಿಂಗಯ್ಯ ಶ್ರೀಗಳ 15ನೇ ಪುಣ್ಯಾರಾಧನೆ ಕಾರ್ಯಕ್ರಮ ನಿಮಿತ್ತ ಜಗದ್ಗುರುಗಳ ಅಡ್ಡಪಲ್ಲಕ್ಕಿ ನಿಗದಿ ಆಗಿತ್ತು. ಶ್ರೀಶೈಲ ಪೀಠದ ಜಗದ್ಗುರು ಡಾ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಅವರು ಬಸವನ ಬಾಗೇವಾಡಿ ತಾಲೂಕಿನ ಚಬನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು.