ಅರ್ಧಂಬರ್ಧ ಕಾಮಗಾರಿ.. ಗದಗ ಕೊಳಗೇರಿ ನಿವಾಸಿಗಳಿಗೆ ಗುಡಿಸಲೇ ಗತಿ! - ಗುಡಿಸಿಲಿನಲ್ಲಿ ಜನ್ರ ವಾಸ
ಗದಗ: ಗದಗ ತಾಲೂಕಿನ ಮುಳಗುಂದ ಸಮೀಪದ ಬಸಾಪುರ ಗ್ರಾಮದಲ್ಲಿ 112 ಮನೆಗಳನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿದೆ. ಸರ್ಕಾರದಿಂದ ಹೊಸ ಮನೆ ನಿರ್ಮಿಸ್ತಾರೆ ಅನ್ನೋ ಕಾರಣಕ್ಕೆ ಇದ್ದ ಹಳೆಯ ಮನೆಗಳನ್ನು ಬೀಳಿಸಿ ಗ್ರಾಮಸ್ಥರು ಜಾಗ ನೀಡಿದ್ರು. ಆದ್ರೆ 2019 ರಲ್ಲಿ ಕಾಮಗಾರಿ ಆರಂಭವಾಗಿದ್ರು ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ಪರಿಣಾಮ ಪೂರ್ಣಗೊಳ್ಳದ ಮನೆ ಮತ್ತು ಗುಡಿಸಲುಗಳಲ್ಲಿಯೇ ಗ್ರಾಮಸ್ಥರು ನೆಲೆಸಿದ್ದಾರೆ.