ಸಿದ್ದಗಂಗಾ ಮಠದಲ್ಲಿ ಸಂಕ್ರಾಂತಿ ಸಂಭ್ರಮ - ಸಿದ್ದಗಂಗಾ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ
ತುಮಕೂರು: ಮಕರ ಸಂಕ್ರಾಂತಿ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಮಠದಲ್ಲಿನ ಸಿದ್ದಗಂಗಾ ಬೆಟ್ಟದಲ್ಲಿರುವ ದೇವರ ದರ್ಶನ ಪಡೆದು ಭಕ್ತರು ಪುನೀತರಾದರು. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯನ್ನು ವಿಭಿನ್ನವಾಗಿ ಅಲಂಕಾರ ಮಾಡಲಾಗಿತ್ತು. ಗದ್ದುಗೆ ಮೇಲೆ ಎಳ್ಳು, ಬೆಲ್ಲ, ಕಬ್ಬು, ಗೆಣಸು, ಅವರೆಕಾಯಿಯನ್ನು ಬಳಸಿ ಎತ್ತಿನಗಾಡಿ ಚಿತ್ರಣವನ್ನು ರಚಿಸಲಾಗಿತ್ತು.