ಕರ್ನಾಟಕ

karnataka

ETV Bharat / videos

ಕುಟುಂಬ ಸಮೇತ ಬಂದು ಹಕ್ಕು ಚಲಾಯಿಸಿದ ರೋರಿಂಗ್ ಸ್ಟಾರ್

By

Published : Dec 5, 2019, 2:49 PM IST

ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪತ್ನಿ ವಿದ್ಯಾ ಹಾಗೂ ತಂದೆ-ತಾಯಿ ಜೊತೆ ಆಗಮಿಸಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರು,ನಾನು ಮತದಾನ ಮಾಡಿದ್ದೇನೆ. ಎಲ್ಲರೂ ಮತದಾನ ಮಾಡಿ. ಇದು ಸಾಮಾಜಿಕ ಜವಾಬ್ದಾರಿ. ನಮ್ಮ ಲೀಡರ್​ನ ನಾವೇ ಆಯ್ಕೆ ಮಾಡಿಕೊಳ್ಳಬೇಕು ಎಂದರು. ನಂತರ ಮಾತನಾಡಿದ ಮುರುಳಿ ತಂದೆ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರಾಗಿರುವ ಚಿನ್ನೇಗೌಡ, ನಾನು ನಮ್ಮ ಕುಟುಂಬ ಜೊತೆ ಬಂದು ಮತದಾನ ಮಾಡಿದ್ದೇವೆ. ಮುರಳಿ ಅವರು ಕೂಡ ಬಂದು ಮತದಾನ ಮಾಡಿದ್ದಾರೆ. ತುಂಬಾ ಕಡಿಮೆ ಮತದಾನ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹೀಗೆ ಆಗಬಾರದು ಎಲ್ಲಾ ಬಂದು ವೋಟ್ ಮಾಡಿ. ಇದು ನಮ್ಮೆಲ್ಲರ ಜವಾಬ್ದಾರಿ ಎಂದರು.

ABOUT THE AUTHOR

...view details