ಪ್ರೀತಂ ಗೌಡರಿಂದ ಪ್ರವಾಹ ಸತ್ರಸ್ತರಿಗೆ ಪರಿಹಾರ ಧನ
ಹಾಸನದ ತಾಲೂಕು ಕಚೇರಿಯಲ್ಲಿ ಬುಧವಾರ ಪ್ರವಾಹ ಪೀಡಿತ ಸಂತ್ರಸ್ತರಿಗೆ ಶಾಸಕರಾದ ಪ್ರೀತಂ ಜೆ. ಗೌಡ ಪರಿಹಾರ ಚೆಕ್ ಮತ್ತು ಆಹಾರ ಪದಾರ್ಥಗಳನ್ನು ವಿತರಿಸಿದರು. ಸಂತ್ರಸ್ತ ಕುಟುಂಬಗಳಿಗೆ ಬಟ್ಟೆ, ಪಾತ್ರೆ ಸೇರಿದಂತೆ ಅಗತ್ಯ ವಸ್ತುಗಳ ಖರಿದೀಗಾಗಿ 3800 ರೂಪಾಯಿಗಳ ಪರಿಹಾರ ಧನದ ಚೆಕ್‍ನ್ನು ವಿತರಿಸಿದರು. ಮನೆಹಾನಿ ಆದಂತಹ ಕುಟುಂಬಗಳಿಗೆ ಸರ್ಕಾರದಿಂದ 90,100 ರೂ ಸಿಗಲಿದೆ ಎಂದು ತಿಳಿಸಿದರು.