ಮಕರ ಸಂಕ್ರಮಣ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ತೀರ್ಥಸ್ನಾನ ಮಾಡುತ್ತಿರುವ ಭಕ್ತರು - ತುಂಗಭದ್ರಾ ನದಿಯಲ್ಲಿ ತೀರ್ಥಸ್ನಾನ
ಕೊಪ್ಪಳ: ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಿಗೆ ಜನ ಸಾಗರವೇ ಹರಿದು ಬಂದಿದೆ. ಬೆಳಗ್ಗೆಯಿಂದಲೇ ನದಿಗಳಲ್ಲಿ ಮಿಂದು ಸಾವಿರಾರು ಜನರು ಪುಣ್ಯಸ್ನಾನ ಮಾಡಿದರು. ಮಧ್ಯಾಹ್ನವಾದರೂ ಜನರು ನದಿ ತೀರಗಳಿಗೆ ಬಂದು ಪುಣ್ಯಸ್ನಾನ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಜಿಲ್ಲೆಯ ತುಂಗಭದ್ರಾ ನದಿ ತೀರದಲ್ಲಿರುವ ದೇವಸ್ಥಾನಗಳಾದ ಹುಗಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ, ಶಿವಪುರದ ಮಾರ್ಕಂಡೇಶ್ವರ ದೇವಸ್ಥಾನ, ಸಾಣಾಪುರ ಸೇರಿದಂತೆ ತುಂಗಭದ್ರಾ ನದಿಯಲ್ಲಿ ಜನರು ಮಿಂದೆದ್ದರು. ಹುಲಹಿ ಗ್ರಾಮದಲ್ಲಿರುವ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಬಳಿಯ ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರು ಬೆಳಗ್ಗೆಯಿಂದಲೇ ನದಿ ಸ್ನಾನ ಮಾಡಿ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದುಕೊಂಡರು. ಮಕರ ಸಂಕ್ರಮಣದ ಹಿನ್ನೆಲೆಯನ್ನು ಹುಲಗಿಗೆ ಇಂದು ಜನ ಸಾಗರವೇ ಹರಿದು ಬಂದಿತ್ತು.