ನಾಡೋಜ ಪಾಟೀಲ್ ಪುಟ್ಟಪ್ಪ ವಿಧಿವಶ: ಸ್ವಗ್ರಾಮದಲ್ಲಿ ನೀರವ ಮೌನ - patil puttappa village
🎬 Watch Now: Feature Video
ನಾಡೋಜ ಪಾಟೀಲ್ ಪುಟ್ಟಪ್ಪ ವಿಧಿವಶ ಹಿನ್ನೆಲೆ ಅವರ ಸ್ವಗ್ರಾಮ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿರುವ ಅವರ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ. ಪಾಟೀಲ್ ಪುಟ್ಟಪ್ಪ ಕುಟುಂಬದ ಸದಸ್ಯರು ಇದೀಗ ಪಾಟೀಲ್ ಪುಟ್ಟಪ್ಪರ ನಿಧನದಿಂದ ದುಃಖಿತರಾಗಿದ್ದಾರೆ. ಪಾಪು ನಿಧನದ ಸುದ್ದಿ ಕೇಳುತ್ತಿದ್ದಂತೆ ಅವರ ಸಂಬಂಧಿಕರು ಪುಟ್ಟಪ್ಪನವರ ಸ್ವಗ್ರಾಮದ ಮನೆಗೆ ಆಗಮಿಸುತ್ತಿದ್ದು ಅವರು ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.