ಜೆಡಿಎಸ್, ಕಾಂಗ್ರೆಸ್ಗೆ ಸೋಲಿನ ಹತಾಶ ಭಾವವಿದೆ: ನಳಿನ್ ಕುಮಾರ್ ಕಟೀಲ್ - ನಳೀನ್ ಕುಮಾರ್ ಕಟೀಲ್
ತುಮಕೂರು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪದ ಅಲೆ ಸೃಷ್ಟಿಸಲು ಸಿದ್ದರಾಮಯ್ಯ ವಿನಾ ಕರಣ ಬಿಜೆಪಿಯ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಹತಾಶ ಭಾವನೆಯಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಜೆಪಿ ವಿರುದ್ಧ ವಿಡಿಯೋ ವೈರಲ್ ಮಾಡುತ್ತಿವೆ ಎಂದರು.