ಲಾಕ್ ಡೌನ್: ಬೇವು, ಬೆಲ್ಲದ ಬದಲು ಬಿಸಿಬಿಸಿ ಕಜ್ಜಾಯ ಕೊಟ್ಟ ಮೈಸೂರು ಪೊಲೀಸರು
ಮೈಸೂರು: ಸದಾಕಾಲ ಜನಜಂಗುಳಿಯಿಂದ ಕೂಡಿರುತ್ತಿದ್ದ ಮೈಸೂರಿನಲ್ಲಿ ಲಾಕ್ ಡೌನ್ನಿಂದಾಗಿ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾಗಿದೆ. ಅನಗತ್ಯವಾಗಿ ಹೊರಗೆ ಬಂದವರಿಗೆ ಪೊಲೀಸರು ಬೇವು ಬೆಲ್ಲದ ಬದಲು ಬಿಸಿ ಬಿಸಿ ಕಜ್ಜಾಯ ಕೊಡುತ್ತಿದ್ದಾರೆ. ಯುಗಾದಿ ಹಬ್ಬದ ದಿನಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನರು ತುಂಬಿ ಕೊಳ್ಳುತ್ತಿದ್ದ ಮಾರುಕಟ್ಟೆಯೀಗ ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿದೆ. ಹಬ್ಬಗಳಲ್ಲಿ ಆಫರ್ ನೀಡಿ ತನ್ನತ್ತ ಸೆಳೆಯುತ್ತಿದ್ದ ದೇವರಾಜ ಅರಸು ರಸ್ತೆಯ ವಾಣಿಜ್ಯ ಮಳಿಗೆಗಳು ಹಬ್ಬದ ಸಂಭ್ರಮದ ಚೈತನ್ಯವನ್ನೇ ಕಳೆದುಕೊಂಡಿವೆ.