ಕರ್ನಾಟಕ

karnataka

ETV Bharat / videos

ಪ್ರವಾಹದಬ್ಬರಕ್ಕೆ ಸಿಲುಕಿ ಮರದ ರೆಂಬೆಗಳಿಗೆ ಸುತ್ತಿಕೊಂಡು ಪ್ರಾಣ ಉಳಿಸಿಕೊಂಡ ಹಾವುಗಳು

By

Published : Aug 7, 2020, 6:40 PM IST

ಶಿವಮೊಗ್ಗ: ಜಿಲ್ಲಾದ್ಯಂತ ವರುಣನ ಆರ್ಭಟ ಹೆಚ್ಚಾಗಿದ್ದು ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬದುಕಿದೆಯಾ ಬಡ ಜೀವವೇ ಎಂಬಂತೆ ತುಂಗೆಯ ಪ್ರವಾಹದಲ್ಲಿ ಜಿಲ್ಲೆಯ ಬೆಕ್ಕಿನ‌ಕಲ್ಮಠದಲ್ಲಿರುವ ದಂಡೆಯ ಪಕ್ಕದ ಅರಳಿ ಮರದಲ್ಲಿ ಹತ್ತಕ್ಕೂ ಹೆಚ್ಚು‌‌ ಹಾವುಗಳು ರಕ್ಷಣೆ ಪಡೆದಿವೆ. ಪ್ರವಾಹಕ್ಕೆ ಕೊಚ್ಚಿ ಹೋಗುವಾಗ ತಪ್ಪಿಸಿಕೊಳ್ಳಲು ನೀರಾವುಗಳು ಅರಳಿ ಮರದ ರೆಂಬೆಗಳಿಗೆ ಸುತ್ತಿಕೊಂಡು ಜೀವ ಉಳಿಸಿಕೊಂಡಿವೆ. ಇವು ಹೆಚ್ಚಾಗಿ ನೀರಿನಲ್ಲಿಯೇ ವಾಸಿಸುತ್ತವೆ. ಅಲ್ಲದೆ, ಚರಂಡಿ ಕಲ್ಲುಗಳ ಕೆಳಗೂ ಕೂಡ ವಾಸಿಸುತ್ತದೆ. ಒಂದು ವೇಳೆ ನೆಲದ ಮೇಲೆ ಬಂದರೆ ಹಾರುತ್ತಾ‌ ಸಾಗುತ್ತವೆ ಎನ್ನುತ್ತಾರೆ ಉರಗ‌ ರಕ್ಷಕ ಸ್ನೇಕ್ ಕಿರಣ್.

ABOUT THE AUTHOR

...view details