ಗ್ರಾಹಕರ ಜೇಬಿನಿಂದ ಮೊಬೈಲ್ ಕದ್ದ ಕಳ್ಳ; ಕೈಚಳಕ ನೋಡಿ.. - ಕ್ಯಾಮರಾದಲ್ಲಿ ಸೆರೆ
ಕಲಬುರಗಿ ಪಟ್ಟಣದ ತಹಶೀಲ್ದಾರ ಕಚೇರಿ ಮುಂದಿನ ಬಸವಗಂಗಾ ಮೆಡಿಕಲ್ ಶಾಪ್‌ನಲ್ಲಿ ಗ್ರಾಹಕನೊರ್ವ ಔಷಧಿ ಖರೀದಿಸುತ್ತಿದ್ದಾಗ ಅಲ್ಲಿಗೆ ಗ್ರಾಹಕರ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳ ಗ್ರಾಹಕರಂತೆ ನಿಂತು ಪಕ್ಕದಲ್ಲಿದ್ದ ವ್ಯಕ್ತಿಯ ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ಔಷಧದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.