ಮಂಗಳೂರಿನಲ್ಲಿ ಖಾಸಗಿ ವಾಹನ ಓಡಾಟಕ್ಕೆ ಕಡಿವಾಣ, ನಗರ ಸಂಪೂರ್ಣ ಸ್ತಬ್ಧ
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಆದೇಶಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಗತ್ಯ ತಿರುಗಾಡುತ್ತಿರುವ ವಾಹನಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ದಿನಸಿ ಅಂಗಡಿಗಳಿಗೆ, ಮೆಡಿಕಲ್ ಮತ್ತು ಹಾಲಿನ ವ್ಯಾಪಾರಕ್ಕೆ ಮಾತ್ರ ಅನುಮತಿಸಲಾಗಿದೆ. ಉಳಿದಂತೆ ನಗರ ಸಂಪೂರ್ಣ ಬಿಕೋ ಎನ್ನುತ್ತಿತ್ತು.