ಮಂಗಳೂರು:ಲಾಕ್ ಡೌನ್ ಆದೇಶದ ನಡುವೆ ನಿಲ್ಲದ ವಾಹನ ಸಂಚಾರ
ಮಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಲಾಗಿದ್ದು ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಪೂರ್ಣ ವಾಹನ ಓಡಾಟ ನಿಷೇಧಿಸಿ ಆದೇಶ ಮಾಡಲಾಗಿದೆ. ಆದರೆ ಈ ಆದೇಶದ ನಡುವೆ ಮಂಗಳೂರಿನಲ್ಲಿ ಹಲವು ವಾಹನಗಳು ಸಂಚರಿಸುತ್ತಿರುವುದು ಕಂಡುಬಂದಿದೆ. ಬೆಳಗ್ಗೆ 7 ರಿಂದ 12 ಗಂಟೆವರೆಗೆ ದಿನಸಿ ಖರೀದಿಗೆ ಅವಕಾಶವಿದ್ದರೂ ವಾಹನಗಳ ಬದಲಿಗೆ ಸಮೀಪದ ಅಂಗಡಿಗಳಲ್ಲಿ ನಡೆದುಕೊಂಡು ಹೋಗಿ ಖರೀದಿಸಬೇಕು ಎಂದು ಆದೇಶಿಸಲಾಗಿತ್ತು. ವೈದ್ಯಕೀಯ ಸೇವೆ ಮತ್ತು ಪಾಸ್ ಹೊಂದಿದವರು ಹೊರತುಪಡಿಸಿ ಇತರ ವಾಹನಗಳ ಓಡಾಟ ಇರುವಂತಿಲ್ಲ ಎಂದು ಆದೇಶದ ನಡುವೆಯು ವಾಹನಗಳ ಓಡಾಟ ನಡೆಯುತ್ತಿದ್ದು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ತಡೆಯುತ್ತಿದ್ದಾರೆ.