ಜನಾರ್ದನ ರೆಡ್ಡಿ ಕೊರೊನಾದಿಂದ ಗುಣಮುಖರಾಗಲಿ ಎಂದು 101 ತೆಂಗಿನಕಾಯಿ ಒಡೆದ ಅಭಿಮಾನಿಗಳು - ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ, ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳಿಂದ ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಲಾಯಿತು.ಬಾಗಲಕೋಟೆ ತಾಲೂಕಿನ ತುಳಸಿಗೇರಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದರು. ಉತ್ತರ ಕರ್ನಾಟಕದಲ್ಲಿಯೇ ಜಾಗೃತ ದೇವರು ಭಕ್ತರ ಹರಕೆಯನ್ನು ಈಡೇರಿಸುವ ಶಕ್ತಿ ಹೊಂದಿರುವ ದೇವಾಲಯ ಎಂದು ಭಕ್ತರು ನಂಬಿಕೆ ಇದೆ. ಈ ಹಿನ್ನೆಲೆ ಕೊರೊನಾ ಸೋಂಕು ತಗುಲಿದ ಗಾಲಿ ಜನಾರ್ದನ ರೆಡ್ಡಿ ಶೀಘ್ರವಾಗಿ ಗುಣ ಮುಖರಾಗಿ ಬರುವಂತೆ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯದ ಹೊರಗೆ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು, ಪ್ರಾರ್ಥನೆ ಸಲ್ಲಿಸಿದರು.
Last Updated : Aug 31, 2020, 6:23 PM IST