ಕರ್ನಾಟಕ

karnataka

ETV Bharat / videos

'ಬೇಡ ಒಂದೇ ಪೊಟ್ಟಣ ಸಾಕು'.. ಬಡವರ ಹೊಟ್ಟೆಯ ಮೇಲೆ ಕೊರೊನಾ ಬರೆ

By

Published : Apr 11, 2020, 12:29 PM IST

ತುಮಕೂರು : ಲಾಕ್‌ಡೌನ್ ಹಿನ್ನೆಲೆ ಜಿಲ್ಲಾಡಳಿತ ವಿವಿಧೆಡೆ ನಿರಾಶ್ರಿತರ ಕೇಂದ್ರಗಳನ್ನು ತೆರೆದು ವಸತಿ ಕಲ್ಪಿಸಿಕೊಟ್ಟಿದೆ. ಈ ನಡುವೆಯೂ ಕೆಲ ನಿರ್ಗತಿಕರು ಆಹಾರವಿಲ್ಲದೆ ಬಳಲುತ್ತಿದ್ದಾರೆ. ಅಂತವರಿಗೆ ಕೆಲ ಸಂಘಟನೆಗಳು ನಿತ್ಯ ಆಹಾರ ನೀಡುತ್ತಿರೋದು ಶ್ಲಾಘನೀಯ. ನಗರದ ಚರ್ಚ್‌ ಸರ್ಕಲ್ ಬಳಿ ವೃದ್ಧರೊಬ್ಬರು ಆಹಾರಕ್ಕಾಗಿ ಪರಿತಪಿಸುತ್ತಿದ್ದ ವೇಳೆ ರಾಜೇಶ್ ಹಾಗೂ ಸ್ನೇಹಿತರು ಆಹಾರದ ಪೊಟ್ಟಣ ನೀಡಿದ್ದಾರೆ. ಈ ವೇಳೆ ವೃದ್ಧರು 'ನಾನು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಕೆಲಸಕ್ಕೆ ಬರಬೇಡ ಅಂದರು, ಹಾಗಾಗಿ ನಿರ್ಗತಿಕ ನಾಗಿದ್ದೇನೆ' ಎಂದು ಹೇಳಿಕೊಂಡ ಮಾತುಗಳು ಮನ ಕಲಕುವಂತೆ ಇತ್ತು. ಅಲ್ಲದೆ ಮತ್ತೊಂದು ಆಹಾರದ ಪೊಟ್ಟಣವನ್ನು ಸ್ವಯಂಸೇವಕರು ಕೊಡಲು ಹೋದ ಸಂದರ್ಭದಲ್ಲಿ ಆ ವೃದ್ಧ 'ಬೇಡ ಒಂದೇ ಪೊಟ್ಟಣ ಸಾಕು' ಎಂದು ಹೇಳಿ ಹೋಗಿದ್ದು ಕೂಡ ಸಾಕಷ್ಟು ಅರ್ಥಗರ್ಭಿತವಾಗಿತ್ತು.

ABOUT THE AUTHOR

...view details