ನೆರೆ ಪರಿಹಾರ ನಕಲಿ ಖಾತೆಗಳಿಗೆ ಜಮಾ..!: ರೈತರ ಆಕ್ರೋಶ - ನಕಲಿ ಖಾತೆಗಳಿಗೆ ಹಣ ಜಮಾ
ಕಳೆದ ವರ್ಷ ವರುಣನ ಅರ್ಭಟಕ್ಕೆ ಸಿಲುಕಿದ ಉತ್ತರ ಕರ್ನಾಟಕದಲ್ಲಿ ರೈತನ ಕೃಷಿ ಭೂಮಿ ಸಂರ್ಪೂಣ ಜಲಾವೃತಗೊಂಡು ಬೆಳೆ ಸಂಪೂರ್ಣ ನೀರುಪಾಲಾಗಿತ್ತು. ಈ ವೇಳೆ, ರೈತರ ಹೋರಾಟಕ್ಕೆ ಮಣಿದು ಅನ್ನದಾತನ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿತ್ತು. ಆದರೆ, ಹಾನಗಲ್ ತಾಲೂಕಿನ ರೈತರಿಗೆ ದೊರಕಬೇಕಾಗಿದ್ದ ಬೆಳೆ ಪರಿಹಾರ ಸಿಗದೆ ಹೋಗಿದೆ.