ಬೀದರ್ನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಅಂಗಡಿ, ದ್ವಿಚಕ್ರ ವಾಹನಗಳು... - ಬೀದರ್ನ ಅಂಗಡಿಯಲ್ಲಿ ಅಗ್ನಿ ಆಕಸ್ಮಿಕ
ಶಾರ್ಟ್ ಸರ್ಕ್ಯೂಟ್ನಿಂದ ಅಂಗಡಿಯೊಂದು ಧಗಧಗನೆ ಹೊತ್ತಿ ಉರಿದು ದ್ವಿಚಕ್ರ ವಾಹನಗಳು ಬೆಂಕಿಗಾಹುಯಿಯಾದ ಘಟನೆ ಬೀದರ್ ನಗರದ ಮೈಲೂರ ಕ್ರಾಸ್ ಬಳಿಯ ಅರುಣ್ ಸ್ವಾಮಿ ಸರ್ವಿಸ್ ಸೆಂಟರ್ನಲ್ಲಿ ನಡೆದಿದೆ. ನೋಡ ನೋಡುತ್ತಲೇ ಬೆಂಕಿ ಅಂಗಡಿಯನ್ನು ಆವರಿಸಿಕೊಂಡಿದೆ. ಅಂಗಡಿಯಲ್ಲಿದ್ದ ಬೈಕ್ಗಳು ಸೇರಿದಂತೆ ಇತರ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದಾದರೂ, ಬೆಂಕಿ ಕೆನ್ನಾಲಿಗೆಗೆ ಅಂಗಡಿಯಲ್ಲಿರುವ ವಸ್ತುಗಳನ್ನು ಉಳಿಸಲಾಗಲಿಲ್ಲ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.